ದುನಿಯಾ ವಿಜಿಯಿಂದ ಅನ್ಯಾಯವಾಗಿದೆ ಎಂದು ಪೊಲೀಸ್ ಮೆಟ್ಟಿಲೇರಿದ್ದ ಪತ್ನಿ ನಾಗರತ್ನ ಹಾಗೂ ಆಕೆಯ ಪೋಷಕರೇ ವರದಕ್ಷಿಣೆ ಕಿರುಕುಳ ಅರೋಪಕ್ಕೆ ಗುರಿಯಾಗಿದ್ದಾರೆ. ನಾಗರತ್ನ ಸೇರಿ ಆಕೆಯ ತವರು ಮನೆಯ ಎಲ್ಲರೂ ತಮ್ಮನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ವಿಷ ಪ್ರಾಶಾನ ಮಾಡಿಸಿದ್ದಾರೆ ಎನ್ನಲಾಗಿದೆ. ನೊಂದ ಮಹಿಳೆ 2 ವಾರಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಬೆಂಗಳೂರು(ಡಿ.13):ದುನಿಯಾ ವಿಜಿಯಿಂದ ಅನ್ಯಾಯವಾಗಿದೆ ಎಂದು ಪೊಲೀಸ್ ಮೆಟ್ಟಿಲೇರಿದ್ದ ಪತ್ನಿ ನಾಗರತ್ನ ಹಾಗೂ ಆಕೆಯ ಪೋಷಕರೇ ವರದಕ್ಷಿಣೆ ಕಿರುಕುಳ ಅರೋಪಕ್ಕೆ ಗುರಿಯಾಗಿದ್ದಾರೆ. ನಾಗರತ್ನ ಸೇರಿ ಆಕೆಯ ತವರು ಮನೆಯ ಎಲ್ಲರೂ ತಮ್ಮನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ವಿಷ ಪ್ರಾಶಾನ ಮಾಡಿಸಿದ್ದಾರೆ ಎನ್ನಲಾಗಿದೆ. ನೊಂದ ಮಹಿಳೆ 2 ವಾರಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಮತ್ತವರ ಹೆತ್ತವರ ವರದಕ್ಷಿಣೆ ದಾಹದಿಂದಾಗಿ ಆ ಮನೆಯ ಸೊಸೆ ಮೀನಾಕ್ಷಿ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಮಾತನಾಡಲೂ ಸಾಧ್ಯವಾಗದ ಈಕೆ ಬದುಕುವ ಭರವಸೆಯನ್ನೂ ವೈದ್ಯರು ನೀಡುತ್ತಿಲ್ಲ.
10 ವರ್ಷಗಳ ಹಿಂದೆ ನಾಗರತ್ನ ತಮ್ಮ ಕೃಷ್ಣ ಮೂರ್ತಿ ಮೀನಾಕ್ಷಿ ಕೈ ಹಿಡಿದಿದ್ದ. ಆರಂಭದಲ್ಲಿ ವರದಕ್ಷಿಣೆ ಕೊಟ್ಟು 10 ಲಕ್ಷ ವೆಚ್ಚದಲ್ಲಿ ಅದ್ದೂರಿಯಾಗೇ ಮೀನಾಕ್ಷಿ ತಂದೆ ಮಲ್ಲಪ್ಪ ಮದುವೆ ಮಾಡ್ಕೊಟ್ಟಿದ್ರು. ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಆರಂಭದಲ್ಲಿ ಚೆನ್ನಾಗೇ ಸಂಸಾರ ಮಾಡಿದ. ಆದರೆ ಇವೆಲ್ಲದರ ಬಳಿಕ ಶುರುವಾಗಿದ್ದು ವರದಕ್ಷಿಣೆ ಕಿರುಕುಳ. ಕೃಷ್ಣ ಮೂರ್ತಿ, ತಂದೆ ರುದ್ರಪ್ಪ ತಾಯಿ ಯಶೋಧಾ, ಸಹೋದರಿಯರಾದ ನಾಗರತ್ನ ಸೇರಿ ಕುಟುಂಬದ 12 ಮಂದಿ ವಿರುದ್ಧ ಕಿರುಕುಳ ದೂರು ನೀಡಿದ್ದಾರೆ.
ಮೊದ ಮೊದಲು ಕಿರುಕುಳ ಕೊಟ್ಟಾಗಲೆಲ್ಲ ಲಕ್ಷಾಂತರ ರೂಪಾಯಿ ವರದಕ್ಷಿಣೆ ಕೊಟ್ಟಿದ್ದಾರೆ. ಅದೆಷ್ಟೋ ಬಾರಿ ಮೀನಾಕ್ಷಿ ಕುಟುಂಬದವರು ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿ ಕೂಡ ಮಾಡಿದ್ದಾರೆ. ಆದರೆ, ಇತ್ತೀಚೆಗೆ ವರದಕ್ಷಿಣೆ ತರುತ್ತಿಲ್ಲ ಎನ್ನುವ ಕಾರಣಕ್ಕೆ ಮೀನಾಕ್ಷಿಗೆ ವಿಷ ನೀಡಿ, ಕತ್ತು ಹಿಸುಕಿ ಚಿತ್ರ ಹಿಂಸೆ ನೀಡಿದ್ದಾರೆ. ಮೀನಾಕ್ಷಿ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಗರತ್ನ ತಂದೆ ರುದ್ರಪ್ಪ, ತಾಯಿ ಯಶೋಧ ಹಾಗೂ ತಮ್ಮ ಕೃಷ್ಣಮೂರ್ತಿಯನ್ನು ಬಂಧಿಸಿ ಆನೇಕಲ್ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಆದರೆ ನಾಗರತ್ನ ಸೇರಿದಂತೆ ಇನ್ನೂ 9 ಮಂದಿ ಬಂಧನವಾಗಿಲ್ಲ.. ಇವರ ಬಂಧಿಸೋ ಯೋಚನೆಯಲ್ಲೂ ಪೊಲೀಸರಿಗಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
