ಪ್ರಕರಣದ ಬಗ್ಗೆ ನ್ಯಾಯಾಲಯದ ಆದೇಶ ಬರುವವರೆಗೆ ಆರೋಪಿ ಮುಗ್ಧ ಎಂದು ಪರಿ ಭಾವಿಸಲು ಅವಕಾಶ ಇರಲಿಲ್ಲ. ಇಂಥದ್ದೊಂದು ತಿದ್ದುಪಡಿಯನ್ನು ಸಾಕ್ಷ್ಯ ಕಾಯ್ದೆಗೆ ಸೇರಿಸಲಾಗಿತ್ತು.
ನವದೆಹಲಿ(ನ.21): ವರದಕ್ಷಿಣೆಗೆ ಬೇಡಿಕೆ ಇಟ್ಟು ಪತ್ನಿಗೆ ಕಿರುಕುಳ ನೀಡಲಾಗಿತ್ತು ಎಂಬುದಕ್ಕೆ ಸಾಕ್ಷ್ಯ ಇದ್ದರೆ ಮಾತ್ರ, ವರದಕ್ಷಿಣೆ ಸಾವು ಪ್ರಕರಣದ ಆರೋಪಿ ಶಿಕ್ಷೆಗೆ ಅರ್ಹನೆಂದು ಭಾವಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಮದುವೆ ಆದ ಏಳು ವರ್ಷಗಳಲ್ಲಿ ಪತ್ನಿ ಸಾವನ್ನಪ್ಪಿದರೆ ಹಾಗೂ ಸಾವಿಗೆ ಮೊದಲು ಆಕೆ ಹಿಂಸೆಗೆ ಒಳಗಾಗಿದ್ದಳು ಎಂಬುದಕ್ಕೆ ಸಾಕ್ಷ್ಯವಿದ್ದರೆ, ಆರೋಪಿಯು ತಪ್ಪು ಮಾಡಿದ್ದಾನೆ ಎಂದು ಮೇಲ್ನೋಟಕ್ಕೆ ಭಾವಿಸಲಾಗುತ್ತಿತ್ತು.
ಪ್ರಕರಣದ ಬಗ್ಗೆ ನ್ಯಾಯಾಲಯದ ಆದೇಶ ಬರುವವರೆಗೆ ಆರೋಪಿ ಮುಗ್ಧ ಎಂದು ಪರಿ ಭಾವಿಸಲು ಅವಕಾಶ ಇರಲಿಲ್ಲ. ಇಂಥದ್ದೊಂದು ತಿದ್ದುಪಡಿಯನ್ನು ಸಾಕ್ಷ್ಯ ಕಾಯ್ದೆಗೆ ಸೇರಿಸಲಾಗಿತ್ತು.
ವರದಕ್ಷಿಣೆ ಸಾವು ಪ್ರಕರಣದ ಆರೋಪಿ, ವರದಕ್ಷಿಣೆಗಾಗಿ ಪೀಡಿಸಿ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂಬುದನ್ನು ಸ್ಪಷ್ಟ ಸಾಕ್ಷ್ಯಗಳೊಂದಿಗೆ ಸಾಬೀತು ಮಾಡಲು ಪ್ರಾಸಿಕ್ಯೂಷನ್ ವಿಫಲವಾದರೆ, ಆ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲು ಆಗದು ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ.