Asianet Suvarna News Asianet Suvarna News

ಮದುವೆ ಗಂಡಿಗೆ ಇನ್ನು ಈ ಪರೀಕ್ಷೆ ಕಡ್ಡಾಯ : ಸರ್ಕಾರ

ಮದುವೆ ಗಂಡುಗಳಿಗೆ ಇನ್ನುಮುಂದೆ ಸರ್ಕಾರವು ಈ ಟೆಸ್ಟ್ ಅನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ವೈವಾಹಿಕ ಸಂಬಂಧಗಳಲ್ಲಿ ಮೂಡುತ್ತಿರುವ ಬಿರುಕು ಸರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಟೆಸ್ಟ್ ಕಡ್ಡಾಯ ಮಾಡುತ್ತಿದೆ. 

Dope test must for Groom In Chandigarh
Author
Bengaluru, First Published Jul 22, 2018, 11:16 AM IST

ಚಂಡೀಗಢ: ಮಾದಕದ್ರವ್ಯ ವ್ಯಸನಕ್ಕೆ ಕಡಿವಾಣ ಹಾಕುವ ನಿಟ್ಟಿನಿಂದ ಪಂಜಾಬ್ ಸರ್ಕಾರ, ಸರ್ಕಾರಿ ಅಧಿಕಾರಿಗಳನ್ನು ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸುತ್ತಿದ್ದರೆ, ಇತ್ತ ಚಂಡೀಗಢ ಸರ್ಕಾರ ಮದುವೆ ಗಂಡಿಗೂ ಮಾದಕದ್ರವ್ಯ ಪರೀಕ್ಷೆ ಒಳಪಡಿಸಲು ಮುಂದಾಗಿದೆ. ಹೌದು, ಚಂಡೀಗಢದಲ್ಲಿ ಮಾದಕದ್ರವ್ಯ ಸೇವನೆ ಎಷ್ಟರ ಮಟ್ಟಿಗೆ ಹಬ್ಬಿದೆ ಅಂದರೆ, ವೈವಾಹಿಕ ಸಂಬಂಧಗಳಲ್ಲೂ ಬಿರುಕು ಬೀಳುತ್ತಿವೆ. 

ಹಲವು ವೈವಾಹಿಕ ಕಲಹಗಳಿಗೆ  ಗಂಡಸರ ಮಾದಕದ್ರವ್ಯ ವ್ಯಸನವೇ ಕಾರಣ ಎಂಬುದನ್ನು ವಿವಿಧ ವಿಚ್ಚೇದನ ಪ್ರಕರಣಗಳಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ಅದು ಮದುವೆಗೂ ಮುನ್ನ ಗಂಡಿಗೆ ಮಾದಕ ವಸ್ತು ಪರೀಕ್ಷೆ  ಮಾಡ ಬಹುದೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿತ್ತು. 

ಈ ಸೂಚನೆಯನ್ನು ಇದೀಗ ಚಂಡೀಗಢ ಆಡಳಿತ ಒಪ್ಪಿದ್ದು, ಮದುವೆ ಗಂಡನ್ನು ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸಲು ಕ್ರಮ  ಕೈಗೊಳ್ಳು ವುದಾಗಿ ಕೋರ್ಟ್‌ಗೆ ತಿಳಿಸಿದೆ. ಅಲ್ಲದೇ ವರನ ಒಪ್ಪಿಗೆ ಇದ್ದರೆ ಮಾದಕದ್ರವ್ಯ ಪರೀಕ್ಷೆಗೆ ಮೆಡಿಕಲ್ ಕಿಟ್‌ಗಳನ್ನು ಒದಗಿಸಲು ಸಿದ್ಧ ವಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ. ಸಂಭಾವ್ಯ ವರನನ್ನು ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸುತ್ತಿರುವುದು ದೇಶದಲ್ಲೇ ಮೊದಲು.

ಮದುವೆ ಆಗುತ್ತಿರುವ ವರ ಡ್ರಗ್ಸ್ ದುಶ್ಚಚಟಕ್ಕೆ ದಾಸನಾಗಿಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಳ್ಳುವುದಕ್ಕಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾದಕ ದ್ರವ್ಯದ ತಪಾಸಣೆಗೆ ಸೌಲಭ್ಯ ಕಲ್ಪಿಸುವ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವಂತೆ ಹರ್ಯಾಣ, ಪಂಜಾಬ್ ಹಾಗೂ ಚಂಡೀಗಢ ಆಡಳಿತಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಲಾಗಿತ್ತು. ಹರ್ಯಾಣ ಹಾಗೂ ಪಂಜಾಬ್ ಸರ್ಕಾರಗಳು ಈಗಾಗಲೇ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿವೆ. 

ಪಂಜಾಬ್ ಸರ್ಕಾರ ಈಗಲೇ ಮಾದಕದ್ರವ್ಯ ತಡೆಗೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಮಾದಕದ್ರವ್ಯ ಕಳ್ಳಸಾಗಣೆಗಾರರಿಗೆ ಗಲ್ಲು ಶಿಕ್ಷೆ ನೀಡುವ ಶಿಫಾರಸು ಮಾಡಲು ನಿರ್ಧರಿಸಿದೆ. ಆದರೆ, ಚಂಡೀಗಢದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ನಿಯಮಗಳ ಕೊರತೆಯಿಂದಾಗಿ ಶೇ.42 ರಷ್ಟು ಮಂದಿ ವ್ಯಸನಿಗಳು ಬ್ಯೂಪ್ರಿನೋರ್ಫಿನ್, ಹೆರಾಯಿನ್, ಕಾಕ್ಟೈಲ್ ನಂತಹ ಮಾದಕ ದ್ರವದ ದಾಸರಾಗಿದ್ದಾರೆ. 7000  ಜನರು ಒಪಿಯಾಡ್ ಒಪಿಯಾಡ್ ಮಾದಕದ್ರವ್ಯ ಸೇವೆನೆ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿದೆ. 

Follow Us:
Download App:
  • android
  • ios