ಜಿಲ್ಲಾ ಪೊಲೀಸ್‌ ವ್ಯಾಪ್ತಿಗೊಳಪಡುವ ಮಸೀದಿ ಅಥವಾ ರಕ್ಷಣೆ ಒದಗಿಸಲಾದ ಮಸೀದಿಗಳಲ್ಲಿ ಮಾತ್ರ ರಂಜಾನ್‌ ಹಬ್ಬದ ಪ್ರಯುಕ್ತದ ಈದ್‌ ಪ್ರಾರ್ಥನೆ ಮಾಡುವಂತೆ ಪೊಲೀಸ್‌ ಸಿಬ್ಬಂದಿಗಳಿಗೆ ಸಲಹೆ ನೀಡಲಾಗಿದೆ.

ಶ್ರೀನಗರ(ಜೂ.26): ಇತ್ತೀಚೆಗಷ್ಟೇ ಇಲ್ಲಿನ ಜಾಮಾ ಮಸೀದಿ ಹೊರಭಾಗದಲ್ಲಿ ಡಿಎಸ್‌ಪಿ ಮಹಮ್ಮದ್‌ ಅಯೂ ಬ್‌ ಪಂಡಿತ್‌ ಅವರನ್ನು ನಗ್ನಗೊಳಿಸಿ ವಿಕೃತವಾಗಿ ಹತ್ಯೆಗೈದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಈದ್‌ ಪ್ರಾರ್ಥನೆಗೆ ತೆರಳಬೇಡಿ ಎಂದು ತನ್ನ ಸಿಬ್ಬಂದಿಗೆ ಜಮ್ಮು-ಕಾಶ್ಮೀರ ಪೊಲೀಸ್‌ ಇಲಾಖೆ ಸೂಚಿಸಿದೆ. ಜಿಲ್ಲಾ ಪೊಲೀಸ್‌ ವ್ಯಾಪ್ತಿಗೊಳಪಡುವ ಮಸೀದಿ ಅಥವಾ ರಕ್ಷಣೆ ಒದಗಿಸಲಾದ ಮಸೀದಿಗಳಲ್ಲಿ ಮಾತ್ರ ರಂಜಾನ್‌ ಹಬ್ಬದ ಪ್ರಯುಕ್ತದ ಈದ್‌ ಪ್ರಾರ್ಥನೆ ಮಾಡುವಂತೆ ಪೊಲೀಸ್‌ ಸಿಬ್ಬಂದಿಗಳಿಗೆ ಸಲಹೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ತಡೆಗಾಗಿ ರಾಜ್ಯ ಪೊಲೀಸ್‌ ಇಲಾಖೆ ಈ ಕರೆ ನೀಡಿದೆ.