ಡಿವೈಎಸ್​​ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಪರಿಷತ್'ನಲ್ಲಿ  ಹೇಳಿಕೆ ನೀಡಿದ್ದಾರೆ.  

ಬೆಂಗಳೂರು (ನ.13): ಡಿವೈಎಸ್​​ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಪರಿಷತ್'ನಲ್ಲಿ ಹೇಳಿಕೆ ನೀಡಿದ್ದಾರೆ.

ನಾನು ಗೃಹ ಮಂತ್ರಿಯಾಗಿ ಆರು ತಿಂಗಳಾದ ಮೇಲೆ ಗಣಪತಿ ಆತ್ಮಹತ್ಯೆ ನಡೆದಿದೆ. ಈಗ ನಾನು ಬೆಂಗಳೂರು ಅಭಿವೃದ್ಧಿ ಸಚಿವ. ಗಣಪತಿ ಸಾವಿಗೆ ಕಾರಣ ಕಂಡುಹಿಡಿಯಲು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ. ಗಣಪತಿ ಸಾವಿನ‌ ನಂತರ ಅವರ ತಂದೆ ಕುಶಾಲಪ್ಪ ಕೊಟ್ಟ ಹೇಳಿಕೆಯಲ್ಲಿ ನನ್ನ ಹೆಸರು ಪ್ರಸ್ತಾಪವಾಗಿಲ್ಲ. ಜತೆಗೆ ಹೈಕೋರ್ಟ್ ಆದೇಶದ ಪ್ರಕಾರ ಪ್ರಕರಣ ಸಿಐಡಿಗೆ ಒಪ್ಪಿಸಲಾಯ್ತು. ಕೋರ್ಟ್ ನಿಗದಿ ಪಡಿಸಿದ ಗಡುವಿನೊಳಗೆ ತನಿಖೆ ಮುಗಿಸುವಂತೆ ಸೂಚಿಸಲಾಗಿತ್ತು ಎಂದು ಜಾರ್ಜ್ ಹೇಳಿದ್ದಾರೆ.

ಮೊದಲು ಸಿಐಡಿ ವರದಿ ಕೊಟ್ಟು ಬಿ ರಿಪೋರ್ಟ್ ಹಾಕಿದಾಗ,ಗಣಪತಿಯವರ ಪುತ್ರ ಅದನ್ನು ಪ್ರಶ್ನಿಸಿಲ್ಲ. ಈಗ ಸುಪ್ರಿಂಕೋರ್ಟ್ ಆದೇಶದಲ್ಲೂ ಸಿಐಡಿ ವರದಿಯನ್ನು ಯಥಾಸ್ಥಿತಿಯಲ್ಲಿ ಇರಿಸಿಯೇ ಸಿಬಿಐ ತನಿಖೆ ಮಾಡಬೇಕು. ಮೂರು ತಿಂಗಳಲ್ಲಿ ವರದಿ ಕೊಡುವಂತೆ ಸೂಚಿಸಿದ್ದಾರೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ನಿಮ್ಮ ಬಳಿ ಯಾವುದೇ ದಾಖಲೆ ಸಾಕ್ಷಿ ಇದ್ದರೆ ಅದನ್ನು ಸಿಬಿಐಗೆ ಒಪ್ಪಿಸಲಿ. ಸಿಬಿಐ ವರದಿ ಬರುವವರೆಗೆ ನಾನು ಕೊಲೆ ಮಾಡಿದ್ದೇನೆ ಎಂದು ಆರೋಪಿಸಿ ಸದನದಲ್ಲಿ ಚರ್ಚಿಸುವುದು ಬೇಡ. ಪ್ರತಿಪಕ್ಷಗಳಿಗೆ ಸಿಬಿಐ ಮೇಲೆ ನಂಬಿಕೆ ಇಲ್ಲದಂತಾಗುತ್ತದೆ ಎಂದು ಜಾರ್ಜ್ ಹೇಳಿದ್ದಾರೆ.