ಇತ್ತೀಚೆಗೆ ಭಟ್ಕಳ ಪುರಸಭೆಯಲ್ಲಿ ಅಂಗಡಿ ಹರಾಜು ಸಂಬಂಧಿಸಿದಂತೆ ನಡೆದ ಗಲಭೆಯನ್ನು ಕಲ್ಲಡ್ಕ ಆಗಲು ಬಿಡಬೇಡಿ. ನಮ್ಮವರನ್ನು ಅನಾವಶ್ಯಕವಾಗಿ ಬಂಧಿಸಿದ್ರೆ ಸುಮ್ಮನಿರಲ್ಲ. ಉತ್ತರಕನ್ನಡ ಡಿಸಿ ಎಸ್ ಎಸ್ ನಕುಲ್ ಅವರಿಗೆ ಶೋಭಾ ಕರಂದಾಜ್ಲೆ  ಫೋನಿನಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಸೆ.19): ಇತ್ತೀಚೆಗೆ ಭಟ್ಕಳ ಪುರಸಭೆಯಲ್ಲಿ ಅಂಗಡಿ ಹರಾಜು ಸಂಬಂಧಿಸಿದಂತೆ ನಡೆದ ಗಲಭೆಯನ್ನು ಕಲ್ಲಡ್ಕ ಆಗಲು ಬಿಡಬೇಡಿ. ನಮ್ಮವರನ್ನು ಅನಾವಶ್ಯಕವಾಗಿ ಬಂಧಿಸಿದ್ರೆ ಸುಮ್ಮನಿರಲ್ಲ. ಉತ್ತರಕನ್ನಡ ಡಿಸಿ ಎಸ್ ಎಸ್ ನಕುಲ್ ಅವರಿಗೆ ಶೋಭಾ ಕರಂದಾಜ್ಲೆ ಫೋನಿನಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಟ್ಕಳ ಪುರಸಭೆಯ ಅಂಗಡಿ ಹರಾಜು ಪ್ರಕ್ರಿಯೆಯಲ್ಲಿ ನಡೆದ ಗಲಾಟೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಅವತ್ತು ಭಟ್ಕಳ ಪುರಸಭೆ ಅಂಗಡಿ ಹರಾಜಿಗೆ ಮುಂದಾದಾಗ ಗಲಾಟೆ ನಡೆದಿತ್ತು.. ಈ ವೇಳೆ ವ್ಯಾಪಾರಿ ರಾಮಚಂದ್ರ ನಾಯ್ಕ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸೋದರ ಸುಟ್ಟುಗಾಯಗೊಂಡಿದ್ದಾನೆ. ಇವತ್ತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮೃತ ರಾಮಚಂದ್ರನ ಮನೆಗೆ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿದರು. ಅದಾದ ಬಳಿಕ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಫೋನ್​ನಲ್ಲೇ ಎಚ್ಚರಿಕೆ ಕೊಟ್ಟರು.

ಭಟ್ಕಳ ಗಲಭೆ ಸಂಬಂಧ ಈಗಾಗಲೇ 66 ಜನ ಹಿಂದು ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ. 11 ಮಂದಿಯನ್ನು ಬಂಧಿಸಲಾಗಿದೆ.. ಸುಖಾಸುಮ್ಮನೇ ಗೂಂಡಾ ಕೇಸ್ ಹಾಕಿದ್ಯಾಕೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ.. ಸರ್ಕಾರ ಒಂದು ಸಮುದಾಯದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸದಿದ್ರೆ ಭಟ್ಕಳಕ್ಕೆ ಬಂದು ಪ್ರತಿಭಟಿಸೋದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.