ಮ್ಯಾಡ್ರಿಡ್(ಜು.18): ವೆಡ್ಡಿಂಗ್‌ ಥೀಮ್ ಅನ್ನೋ ಕಾನ್ಸೆಪ್ಟ್ ಈಗ ಎಲ್ಲ ವಿವಾಹ ಸಮಾರಂಭಗಳಲ್ಲಿಯೂ ಕಾಮನ್ ಆಗಿದೆ. ಬಹುತೇಕ ಜೋಡಿಗಳೂ ಸಾಂಪ್ರದಾಯಿಕ ವಿವಾಹದಿಂದ ಭಿನ್ನವಾಗಿ ಧೀಮ್ ಇಟ್ಟುಕೊಂಡು ವಿವಾಹವಾಗುತ್ತಿದ್ದಾರೆ. ಇದರಿಂದ ಸಮಾರಂಭಕ್ಕೆ ಬರುವ ಅತಿಥಿಗಳಿಗೆ ಹೊಸದೊಂದು ಅನುಭವವಾಗುವುದು ಸುಳ್ಳಲ್ಲ. ಆದರೆ ಯುವ ಜನರು ಮದುವೆಯಲ್ಲಿ ಚಿತ್ರ ವಿಚಿತ್ರ ಥೀಮ್ ಇಟ್ಟುಕೊಂಡು ಟೀಕೆಗೊಳಗಾಗುತ್ತಿದ್ದಾರೆ.

ಸ್ಪೈನ್‌ನ ಯುವ ಜೋಡಿ ತಮ್ಮ ವಿವಾಹಕ್ಕೆ ಸಫಾರಿ ಥೀಮ್ ಆರಿಸಿಕೊಂಡು ಈಗ ಪ್ರಾಣಿ ದಯಾ ಸಂಘಟನೆಗಳ ಟೀಕೆಗೆ ಗುರಿಯಾಗಿದ್ದಾರೆ. ವಿವಾಹ ಸಮಾರಂಭದಲ್ಲಿ ಎಲ್ ಬಾರ್‌ ಸಮೀಪ ಆಕರ್ಷಣೆಗೆಂದು ಎರಡು ಕತ್ತೆಗಳಿಗೆ ಝೀಬ್ರಾ ಮಾದರಿಯಲ್ಲಿ ಬಣ್ಣ ಬಳಿದಿದ್ದು, ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಏಂಜಲ್ ಥೋಮಸ್ ಹೆರೇರಾ ಎಂಬವರು ಈ ಬಗ್ಗೆ ಮದರ್ ಅರ್ತ್‌ ಎಂಬ ಪ್ರಾಣಿ ದಯಾ ಸಂಘಟನೆಗೆ ಮಾಹಿತಿ ನಿಡಿದ್ದಾರೆ. ತಕ್ಷಣವೇ ಈ ವಿಷಯ ಆಫ್ರಿಕದ ಪ್ರಾದೇಶಿಕ ಕಚೇರಿಯ ಗಮನಕ್ಕೆ ತರಲಾಗಿದೆ.

 

ಬಾರ್‌ಗೆ ಆಫ್ರಿಕನ್ ಔಟ್‌ಲುಕ್‌ ನೀಡಲು ಪ್ರಾಣಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಇದು ನಾಚಿಗೆಯ ಸಂಗತಿ ಎಂದು ಹೆರೇರಾ ಬರೆದುಕೊಂಡಿದ್ಧಾರೆ. ಚಿತ್ರ ಹಾಗೂ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೖರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಬಗ್ಗೆ ತೀವ್ರ ಟೀಕೆ ವ್ಯಕ್ತಡಪಸಿದ್ದಾರೆ.