ಆರು ಮುಸ್ಲಿಂ ರಾಷ್ಟ್ರಗಳಿಗೆ ಪ್ರವಾಸ ನಿಷೇಧ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ವಿವಾದಿತ ನಿರ್ಧಾರರ ಕೈಗೊಂಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಬಾಲ್ಯದಲ್ಲೇ ಅಮೆರಿಕಕ್ಕೆ ಬಂದವರು ಅಲ್ಲೇ ನೆಲೆಯೂರಿ ಉದ್ಯೋಗಕ್ಕೆ ಸೇರಲು ಅನುವು ಮಾಡಿಕೊಡುವ ಬರಾಕ್ ಒಬಾಮಾ ಕಾಲದ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ರದ್ದುಗೊಳಿಸಿದ್ದಾರೆ. ಇದರಿಂದ 800,000 ವಲಸಿಗರು ತೊಂದರೆ ಸಿಲುಕಲಿದ್ದು, 7000 ಭಾರತೀಯರು ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ವಾಷಿಂಗ್ಟನ್(ಸೆ.06): ಆರು ಮುಸ್ಲಿಂ ರಾಷ್ಟ್ರಗಳಿಗೆ ಪ್ರವಾಸ ನಿಷೇಧ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ವಿವಾದಿತ ನಿರ್ಧಾರರ ಕೈಗೊಂಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಬಾಲ್ಯದಲ್ಲೇ ಅಮೆರಿಕಕ್ಕೆ ಬಂದವರು ಅಲ್ಲೇ ನೆಲೆಯೂರಿ ಉದ್ಯೋಗಕ್ಕೆ ಸೇರಲು ಅನುವು ಮಾಡಿಕೊಡುವ ಬರಾಕ್ ಒಬಾಮಾ ಕಾಲದ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ರದ್ದುಗೊಳಿಸಿದ್ದಾರೆ. ಇದರಿಂದ 800,000 ವಲಸಿಗರು ತೊಂದರೆ ಸಿಲುಕಲಿದ್ದು, 7000 ಭಾರತೀಯರು ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ಡಿರ್ಡ್ ಆ್ಯಕ್ಷನ್ ಫಾರ್ ಚೈಲ್ಡ್‌ ಹುಡ್ ಅರೈವಲ್- ಡಿಎಸಿಎ ಯೋಜನೆಯನ್ನು ರದ್ದುಗೊಳಿಸಿರುವುದಾಗಿ ಅಮೆರಿಕ ಅಟಾರ್ನಿ ಜನರಲ್ ಜ್‌ಫ್ ಸೆಸ್ಸನ್ಸ್ ತಿಳಿಸಿದ್ದಾರೆ. 2018ರಲ್ಲಿ ಡಿಎಸಿಎ ಯೋಜನೆ ಅಂತ್ಯಗೊಳ್ಳಲಿದೆ. ಹೀಗಾಗಿ ಡಿಎಸಿಎ ಯೋಜನೆ ಅಡಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ 8 ಲಕ್ಷ ಮಂದಿ ಅಮೆರಿಕದಿಂದ ಹೊರ ಹೋಗಬೇಕಾಗುತ್ತದೆ. ಟ್ರಂಪ್ ಅವರ ಈ ಘೋಷಣೆ ವ್ಯಾಪಕ ಟೀಕೆ ಮತ್ತು ಪ್ರತಿ‘ಟನೆಗಳು ವ್ಯಕ್ತವಾಗಿವೆ.

ಗೂಗಲ್ ಸಿಇಒ ಸುಂದರ್ ಪಿಚೈ, ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರು ಟ್ರಂಪ್ ಅವರ ನಿರ್ಧಾರರವನ್ನು ಖಂಡಿಸಿದ್ದಾರೆ. ನೂರಾರು ಪ್ರತಿಭಟನಾ ಕಾರರು ಶ್ವೇತಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.