ವಾಷಿಂಗ್ ಟನ್ (ಸೆ.15): ಪುಣೆ ಮತ್ತು ಗುರ್ಗಾಂವ್’ನಲ್ಲಿ ರಿಯಲ್ ಎಸ್ಟೇಟ್ ಹೊಂದಿರುವ ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಅಮೆರಿಕಾ ವಿದೇಶಾಂಗ ನೀತಿಯನ್ನು ಭಾರತದಲ್ಲಿ ಜಾರಿಗೊಳಿಸಿದಂತಾಗುತ್ತದೆ ಎಂದು ಅಲ್ಲಿನ ಪ್ರತಿಷ್ಠಿತ ಪತ್ರಿಕೆಯೊಂದು ವರದಿ ಮಾಡಿದೆ.
ಒಂದು ವೇಳೆ ಟ್ರಂಪ್ ಭಾರತದ ಜೊತೆ ಕಠಿಣವಾಗಿ ವರ್ತಿಸಿದರೆ ಇದು ಪುಣೆಯಲ್ಲಿರುವ ಅವರ ಹೂಡಿಕೆಯ ಮೇಲೆ ಪರಿಣಾಮ ಬೀರಬಹುದು. ಒಂದು ವೇಳೆ ಟ್ರಂಪ್ ಪಾಕಿಸ್ತಾನದ ಜೊತೆ ಕಠಿಣವಾಗಿ ವರ್ತಿಸಿದರೆ ಇದು ಭಾರತವನ್ನು ಓಲೈಸುವ ಧೋರಣೆಯಿರಬಹುದು. ಒಟ್ಟಿನಲ್ಲಿ ಇದು ವಿದೇಶಾಂಗ ಹಿತಾಸಕ್ತಿ ಆಗಿರುತ್ತದೆ ಎಂದು ವೀಕ್ಲಿ ವರದಿ ಮಾಡಿದೆ.
ಭಾರತದಲ್ಲಿ ಅಮೆರಿಕಾ ವಿದೇಶಾಂಗ ನೀತಿ ಹಾಗೂ ಡೊನಾಲ್ಡ್ ಟ್ರಂಪ್ ಆರ್ಗನೈಸೇಶನ್ ನೀತಿಯ ನಡುವೆ ವಿರೋಧಾಭಾಸವಿದೆ.
ಪುಣೆ ಮತ್ತು ಗುರ್ಗಾವ್ ನಲ್ಲಿ ಇವರ ರಿಯಲ್ ಎಸ್ಟೇಟ್ ಉದ್ಯಮವಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಉನ್ನತ ಮಟ್ಟದ ನಾಯಕರು ಟ್ರಂಪ್ ಕುಟುಂಬದ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.
