ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು ಎಂಬ ಸುಳ್ಳು ವರದಿಗಳಿಗೆ ಮಾಧ್ಯಮಗಳು ಬೆಲೆತೆರಬೇಕಾದಿತು ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ವಾಷಿಂಗ್ಟನ್ (ಜ.22): ನೂತನ ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿದ ಬಳಿಕವೂ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆಯನ್ನು ನೀಡುವ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೂಮಿಯ ಮೇಲಿರುವ ಅತ್ಯಂತ ಅಪ್ರಾಮಾಣಿಕ ಜನರು ಪತ್ರಕರ್ತರು ಎಂದು ಹೇಳುವ ಮೂಲಕ ಮಾಧ್ಯಮಗಳ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ಸಿಐಏ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಟ್ರಂಪ್ ಮಾತನಾಡುತ್ತಿದ್ದರು.

ಮಾಧ್ಯಮದೊಂದಿಗೆ ನಾನು ಒಂದು ರೀತಿಯ ಯುದ್ಧ ನಡೆಸುತ್ತಲೇ ಇದ್ದೇನೆ; ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು ಎಂಬ ಸುಳ್ಳು ವರದಿಗಳಿಗೆ ಮಾಧ್ಯಮಗಳು ಬೆಲೆತೆರಬೇಕಾದಿತು ಎಂದು ಎಚ್ಚರಿಸಿದ್ದಾರೆ.

ಸಮಾರಂಭದಲ್ಲಿ ಮಿಲಿಯನ್’ಗಟ್ಟಲೇ ಸಭಿಕರು ಸೇರಿದ್ದರು; ಆದರೆ ಮಾಧ್ಯಮಗಳು ಖಾಲಿಯಿದ್ದ ಸ್ಥಳದ ಚಿತ್ರವನ್ನು ತೋರಿಸುವ ಮೂಲಕ ಜನರೇ ಸೇರಿಲ್ಲವೆಂದು ಬಿಬಿಸಲು ಪ್ರಯತ್ನಿಸಿವೆ, ಎಂದು ಟ್ರಂಪ್ ಕಿಡಿಕಾರಿದ್ದಾರೆ.