ವಾಷಿಂಗ್ಟನ್‌: ‘‘ಅಮೆರಿಕ ಪಾಲನೆ ಮಾಡುತ್ತಿರುವ ಸ್ವತಂತ್ರ ಉದ್ಯಮ, ಕಠಿಣ ಕೆಲಸ, ಕೌಟುಂಬಿಕ ಮೌಲ್ಯಗಳು ಮತ್ತು ಅಮೆರಿಕದ ವಿದೇಶಾಂಗ ನೀತಿಗಳೆಲ್ಲವೂ ಹಿಂದೂ ಸಮುದಾಯ ವಿಶ್ವಕ್ಕೆ ನೀಡಿರುವ ಕೊಡುಗೆ,’’ ಎನ್ನುವ ಮೂಲಕ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹಿಂದೂ ಸಮುದಾಯವನ್ನು ಕೊಂಡಾಡಿದ್ದಾರೆ. ಜತೆಗೆ, ಅ.15ರ ‘ಇನ್‌ಕ್ರೆಡಿಬಲ್‌’ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ರಾಷ್ಟ್ರಗಳು, ಧರ್ಮಗಳನ್ನು ಧ್ರುವೀಕರಿಸುವ ಟ್ರಂಪ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ಮತ್ತು ‘ದ ನ್ಯೂ ಯಾರ್ಕ್ ಟೈಮ್ಸ್‌’ ಪತ್ರಿಕೆಗಳು ಅಭಿಪ್ರಾಯಪಟ್ಟಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

(ಕೃಪೆ: ಕನ್ನಡಪ್ರಭ)