ವಾಷಿಂಗ್ಟನ್‌ (ಅ.08): ಅಮೆರಿಕದ ಶ್ವೇತ ಭವನದ ಆಡಳಿತ ಚುಕ್ಕಾಣಿ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿರುವ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ಗೆ 2005ರಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ ವಿಡಿಯೋ ಅಡ್ಡಿಯಾಗುವ ಸಾಧ್ಯತೆಯಿದೆ. ಭಾನುವಾರ ನಡೆಯಲಿರುವ 2ನೇ ಅಧ್ಯಕ್ಷೀಯ ಪ್ರಚಾರ ನಡೆಯಲಿರುವ ಸಂದರ್ಭದಲ್ಲೇ ವಿಡಿಯೋ ಬಿಡುಗಡೆಯಾಗಿದೆ.

‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆಯಿಂದ ಪಡೆಯಲಾಗಿರುವ ವಿಡಿಯೋದಲ್ಲಿ ಡೊನಾಲ್ಡ್‌ ಟ್ರಂಪ್‌ ಮಹಿಳೆಯರ ಕುರಿತು ಹೇಯವಾಗಿ ಮಾತನಾಡಿದ್ದಾರೆ. ‘‘ನಾನು ಅವರಿಗೆ ಕೇವಲ ಚುಂಬನ ನೀಡಲು ಮುಂದಾಗಿದ್ದೆ. ನೀವು ಪ್ರಸಿದ್ಧ ವ್ಯಕ್ತಿಯಾಗಿದ್ದರೆ, ನಿಮಗೆ ಚುಂಬನ ನೀಡಲು ಅವಕಾಶ ನೀಡುತ್ತಾರೆ,’’ ಎಂದು ವಿಡಿಯೊ ರೆಕಾರ್ಡಿಂಗ್‌ನಲ್ಲಿ ಟ್ರಂಪ್‌ ಹೇಳಿದ್ದಾರೆ. ಮಹಿಳೆಯರ ಕುರಿತಾಗಿ ಟ್ರಂಪ್‌ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡೊನಾಲ್ಡ್‌ ಟ್ರಂಪ್‌, ‘‘ಹಲವು ವರ್ಷಗಳ ಹಿಂದೆ ಲಾಕರ್‌ ಕೋಣೆಯಲ್ಲಿ ಹಾಸ್ಯಮಯವಾದ ಖಾಸಗಿ ಸಂಭಾಷಣೆಯನ್ನು ವಿಡಿಯೊ ಮಾಡಿಲಾಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ,’’ ಎಂದಿದ್ದಾರೆ.

ಹಿಲರಿಗೆ ಕ್ಲಿಂಟನ್‌ ಸಲಹೆ: ಕೂಪನ್‌ಹೇಗ್‌ ಶೃಂಗಸಭೆಯ-2009ರ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಮುನ್ನ ಬಡರಾಷ್ಟ್ರಗಳನ್ನು ಚೀನಾ ಮತ್ತು ಬಾರತದಿಂದ ದೂರ ಇಡುವಂತೆ ಹಿಲರಿ ಕ್ಲಿಂಟನ್‌ಗೆ ಅವರ ಪತಿ ಬಿಲ್‌ ಕ್ಲಿಂಟನ್‌ ಸಲಹೆ ನೀಡಿದ್ದರು. 2009ರ ಡಿ.17ರಂದು ನಡೆದ ಕೂಪನ್‌ಹೇಗ್‌ ಒಪ್ಪಂದದ ಮುನ್ನ ದಿನ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಹಿಲರಿ ಕ್ಲಿಂಟನ್‌ಗೆ ಬಿಲ್‌ ಕ್ಲಿಂಟನ್‌ ಇ-ಮೇಲ್‌ ಮಾಡಿದ್ದರು.