ಸೀತಾಮಾತೆಯ ಕುರಿತು ಯುಪಿ ಡಿಸಿಎಂ ದಿನೇಶ್ ಶರ್ಮ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಿಮ್ಮ ಕೀಳು ರಾಜಕೀಯಕ್ಕಾಗಿ ಸೀತಾಮಾತೆಯ ಹೆಸರಿಗೆ ಮಸಿ ಬಳಿಯಬೇಡಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದೆ.
ನವದೆಹಲಿ(ಜೂ.2): ಸೀತಾಮಾತೆಯ ಕುರಿತು ಯುಪಿ ಡಿಸಿಎಂ ದಿನೇಶ್ ಶರ್ಮ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಿಮ್ಮ ಕೀಳು ರಾಜಕೀಯಕ್ಕಾಗಿ ಸೀತಾಮಾತೆಯ ಹೆಸರಿಗೆ ಮಸಿ ಬಳಿಯಬೇಡಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದೆ.
ರಾಮಾಯಣ ಕಾಲದಲ್ಲೇ ಪ್ರಣಾಳ ಶಿಶು ತಂತ್ರಜ್ಞಾನ ಚಾಲ್ತಿಯಲ್ಲಿದ್ದು, ಸೀತಾಮಾತೆ ಟೆಸ್ಟ್ ಟ್ಯೂಬ್ ಬೇಬಿಯಾಗಿದ್ದಳು ಎಂದು ದಿನೇಶ್ ಶರ್ಮ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, ಬಿಜೆಪಿ ಸೀತಾಮಾತೆಯನ್ನು ತಮ್ಮ ರಾಜಕೀಯ ಬಲಿಪಶುವನ್ನಾಗಿ ಪರಿವರ್ತಿಸಿದೆ ಎಂದು ಆರೋಪಿಸಿದ್ದಾರೆ.
ಸೀತಾಮಾತೆ ಕುರಿತಾಗಿ ಕೀಳಾಗಿ ಮಾತನಾಡುತ್ತಿರುವ ಇದೇ ಬಿಜೆಪಿ, ಸಂಸತ್ತಿನಲ್ಲಿ ಆಕೆಯ ಕುರಿತು ಕೇಳಲಾದ ಪ್ರಶ್ನೆಗೆ ಸೀತೆಯ ಅಸ್ತಿತ್ವವನ್ನೇ ಅಲ್ಲಗಳೆದಿತ್ತು ಎಂದು ಸುರ್ಜೆವಾಲಾ ನೆನಪಿಸಿದ್ದಾರೆ. ಸೀತೆಯನ್ನು ಟೆಸ್ಟ್ ಟ್ಯೂಬ್ ಬೇಬಿ ಎಂದು ಕರೆದು ಜನರ ಭಾವನೆಗಳಿಗೆ ಬಿಜೆಪಿ ನಾಯಕರು ಧಕ್ಕೆ ತಂದಿದ್ದಾರೆ ಎಂದು ಅವರು ಹರಿಹಾಯ್ದಿದ್ದಾರೆ.
