ಬೆಂಗಳೂರು[ಆ.29]: ಹಾರ, ಶಾಲು ನೀಡಲು ಖರ್ಚು ಮಾಡುವ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಭಿತ್ತಿಪತ್ರ ಅಂಟಿಸಿದ ದೇಣಿಗೆ ಪೆಟ್ಟಿಗೆಯನ್ನು ತಮ್ಮ ವಿಧಾನಸೌಧದ ಕಚೇರಿ ಮುಂದೆ ಇಡುವ ಮೂಲಕ ನೂತನ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಸಿ.ಸಿ. ಪಾಟೀಲ್ ಗಮನ ಸೆಳೆದಿದ್ದಾರೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ತಮ್ಮ ಕಚೇರಿ ಬಳಿ ಹಾರ, ತುರಾಯಿಗೆ ವೆಚ್ಚ ಮಾಡುವ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ತಮ್ಮ ಆಪ್ತರು, ಅಭಿಮಾನಿಗಳು, ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಸಚಿವರನ್ನು ಅಭಿನಂದಿಸಲು ಶಾಲು, ಹಾರದೊಂದಿಗೆ ಬಂದ ಜನರು ಈ ಬರಹ ನೋಡಿ ಹಣವನ್ನು ಪೆಟ್ಟಿಗೆಗೆ ಹಾಕುತ್ತಿದ್ದಾರೆ.

ಪ್ರವಾಹಕ್ಕೆ ನಲುಗಿದ ಕರ್ನಾಟಕ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ಪೆಟ್ಟಿಗೆಯಲ್ಲಿ ಸಂಗ್ರಹವಾಗುವ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ತಿಳಿಸಿದರು,