Asianet Suvarna News Asianet Suvarna News

ಬಾಡಿಗೆಗೆ ಶ್ವಾನಗಳು ಲಭ್ಯ!

ಬೆಂಗಳೂರು ಸೇರಿ ಇತರ ನಗರಗಳಲ್ಲಿ ಶೀಘ್ರವೇ ಬಾಡಿಗೆಗೆ ಶ್ವಾನಗಳ ಲಭ್ಯ!

ಒತ್ತಡದ ಜೀವನ ಕ್ರಮದಲ್ಲಿ ಪ್ರಾಣಿಗಳ ಸಾಕಾಣಿಕೆ ಅಸಾಧ್ಯ

ದೇಶದಲ್ಲಿ ತಲೆ ಎತ್ತಲಿವೆ 100 ಬಾಡಿಗೆ ಶ್ವಾನ ಕೇಂದ್ರಗಳು

Dogs are available for rent from now onwards

ನವದೆಹಲಿ: ಬಿಡುವಿಲ್ಲದ ಕೆಲಸದ ಒತ್ತಡ. ಇನ್ನಿತರ ಕಾರಣಗಳಿಗಾಗಿ ಶ್ವಾನಗಳ ಮೇಲೆ ಪ್ರೀತಿಯಿದ್ದರೂ, ಮನುಷ್ಯನ ಸ್ನೇಹಿ ಪ್ರಾಣಿಯಾದ ನಾಯಿಯನ್ನು ಸಾಕಲು ಸಾಧ್ಯವಾಗುತ್ತಿಲ್ಲವೇ. ಹಾಗಿದ್ರೆ, ಚಿಂತೆ ಬೇಡ. ಸಿಲಿಕಾನ್‌ ಸಿಟಿ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ ಸೇರಿದಂತೆ ದೇಶದ 100 ಮಹಾ ನಗರಗಳಲ್ಲಿ ಬಾಡಿಗೆಗೆ ಲಭ್ಯವಿರುವ ಶ್ವಾನ ಕೇಂದ್ರಗಳು ಶೀಘ್ರದಲ್ಲೇ ಸ್ಥಾಪನೆಯಾಗಲಿವೆ.

ಈಗಾಗಲೇ ಪಶ್ಚಿಮ ರಾಷ್ಟ್ರಗಳಲ್ಲಿ ಭಾರೀ ಪ್ರಸಿದ್ಧಿ ಪಡೆದಿರುವ ಬಾಡಿಗೆ ನಾಯಿ ಸಾಕಾಣಿಕೆಯನ್ನು ಭಾರತದ ನಗರಗಳಲ್ಲಿಯೂ ಪ್ರಚುರ ಪಡಿಸಲು ರಾಜಸ್ಥಾನದ ಜೈಪುರ ಮೂಲದ ಶ್ವಾನ ಪ್ರಿಯ ವಿರೇನ್‌ ಶರ್ಮಾ ಅವರು ಮುಂದಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಾಡಿಗೆ ಶ್ವಾನ ಕೇಂದ್ರಗಳು ಸ್ಥಾಪನೆಗೊಳ್ಳಲಿವೆ ಎಂದು ಹೇಳಿದ್ದಾರೆ.

ಮುಂದಿನ 12 ತಿಂಗಳಲ್ಲಿ ಭಾರತದ ಹಲವು ನಗರಗಳಲ್ಲಿ ಮ್ಯಾಡ್‌ ಅಬೌಟ್‌ ಡಾಗ್ಸ್‌(ನಾಯಿ ಕುರಿತಾದ ಹುಚ್ಚು ಪ್ರೀತಿ) ಎಂಬ ಹೆಸರಿನ ಬಾಡಿಗೆ ಶ್ವಾನದ 100 ಕೇಂದ್ರಗಳನ್ನು ತೆರೆಯಲು ಅವರು ತೀರ್ಮಾನಿಸಿದ್ದಾರೆ. ಅಲ್ಲದೆ, ಈ ಕೇಂದ್ರದಲ್ಲಿ ನಾಯಿಗಳಿಗೆ ಸಂಬಂಧಿಸಿದ ಸಲೂನ್‌, ಸ್ಪಾ, ಹೋಟೆಲ್‌, ತರಬೇತಿ ಸಂಸ್ಥೆಗಳು ಸಹ ಇರಲಿವೆ ಎಂದು ಹೇಳಲಾಗಿದೆ. ಈ ರೀತಿಯ ಸೇವೆಗಳು ಈಗಾಗಲೇ ರಾಜಸ್ಥಾನದ ಜೈಪುರದಲ್ಲಿ ಲಭ್ಯವಿದ್ದು, ಇದೇ ಕೇಂದ್ರಗಳನ್ನು ರಾಷ್ಟಾ್ರದ್ಯಂತ ವಿಸ್ತರಿಸಬೇಕು ಎಂಬುದು ವಿರೇನ್‌ ಶರ್ಮಾ ಅವರ ಆಕಾಂಕ್ಷೆಯಾಗಿದೆ. ಇದರಿಂದಾಗಿ ವಾರಪೂರ್ತಿ ಕೆಲಸದಲ್ಲೇ ಮಗ್ನರಾಗುವ ಸಾರ್ವಜನಿಕರು, ವಾರಕ್ಕೆ ಒಂದು ದಿನ ಅಥವಾ ಎರಡು ದಿನ ಡಾಗ್‌ ಡೇ ಅಥವಾ ದಿನದ ಕೆಲವು ಗಂಟೆಗಳ ಕಾಲ ನಾಯಿಗಳ ಜತೆ ಆಟವಾಡಿ, ತಮ್ಮ ಒತ್ತಡವನ್ನು ನೀಗಿಸಿಕೊಳ್ಳಬಹುದಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವಿರೇಶ್‌ ಶರ್ಮಾ, ‘ಕೆಲಸದಲ್ಲೇ ಮುಳುಗಿ ಹೋಗಿರುವ ನೌಕರರು, ನಾಯಿ ಮೇಲಿನ ಪ್ರೀತಿ ಹೊರತಾಗಿಯೂ ಅವರಿಗೆ ನಾಯಿ ಸಾಕುವಷ್ಟುಸಮಯಾವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಬಾಡಿಗೆ ನಾಯಿ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, 2ನೇ ಆರ್ಥಿಕ ವರ್ಷದಲ್ಲಿ ಬಾಡಿಗೆ ಶ್ವಾನ ಕೇಂದ್ರಗಳು ಕಾರ್ಯರೂಪಕ್ಕೆ ಬರಲಿವೆ,’ ಎಂದಿದ್ದಾರೆ.

Follow Us:
Download App:
  • android
  • ios