ನವದೆಹಲಿ[ಜೂ. 21] ಕೊಲೆ ತನಿಖೆ, ಬಾಂಬ್ ಪತ್ತೆ ಮಾಡುವುದರಲ್ಲಿ ಸದಾ ಬ್ಯುಸಿಯಾಗಿರುತ್ತದ್ದ ಶ್ವಾನಗಳು ಶುಕ್ರವಾರ ಬಹಳ ಶಿಸ್ತಿನಿಂದ ಯೋಗ ಮಾಡುವುದರಲ್ಲಿ ತಲ್ಲೀನರಾಗಿದ್ದವು.

ಪ್ರಧಾನಿ ನರೇಂದ್ರ ಮೋದಿ ರಾಂಚಿಯಲ್ಲಿ 40 ಸಾವಿರ ಜನರೊಂದಿಗೆ ಮುಂಜಾನೆಯೇ ಯೋಗ ಮಾಡಿ ಸಂದೇಶ ನೀಡಿದರು. ಆರೋಗ್ಯ ಕಾಪಾಡಿಕೊಳ್ಳಲು, ಆಧುನಿಕ ಜಗತ್ತಿನ ಜಂಜಾಟಗಳಿಂದ ನೆಮ್ಮದಿ ಕಂಡುಕೊಳ್ಳಲು ಯೋಗ ಹೇಗೆ ನೆರವಾಗುತ್ತದೆ ಎಂಬುದನ್ನು ತಿಳಿಸಿದರು.

ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು ಹೀಗೆ

ಭಾರತದ ಸೇನೆಯ ಶಿಸ್ತಿನ ಶ್ವಾನಗಳು ಯೋಧರೊಂದಿಗೆ ವಿವಿಧ ಯೋಗಾಸನಗಳ ಪ್ರದರ್ಶನ ನೀಡಿದವು. ಇನ್ನು ಬಾರ್ಡರ್ ಸೆಕ್ಯೂರಿ ಪೋರ್ಸ್[ಬಿಎಸ್ ಎಫ್] ನ ಶ್ವಾನಗಳು ನಾವೇನು ಕಮ್ಮಿ ಎಂದು ತೋರಿಸಿಕೊಟ್ಟವು. ಹಾಗಾದರೆ ಇನ್ನೇಕೆ ತಡ.. ನೀವು ಒಮ್ಮೆ ಶಿಸ್ತಿನ ಶ್ವಾನಗಳ ಯೋಗಪ್ರದರ್ಶನ ನೋಡಿಕೊಂಡು ಬನ್ನಿ...