ಸಿಲಿಕಾನ್ ಸಿಟಿಯಲ್ಲಿ ಮನೆ ಕಳ್ಳತನ ಮಾಮೂಲು ಸುದ್ದಿಯಾಗಿ ಬಿಟ್ಟಿದೆ. ಆದರೆ ಇದೀಗ ನಗರದಲ್ಲಿ ನಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹೌದು ಸಾಕು ನಾಯಿಗಳ ಮೇಲೆ ಕಣ್ಣೀಟ್ಟ ಖರ್ತನಾಕ್ ಕಳ್ಳರು ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ನಾಯಿ ಕಳ್ಳತನ ಮಾಡುತ್ತಿದ್ದಾರೆ.
ಬೆಂಗಳೂರು (ಮೇ 29): ಸಿಲಿಕಾನ್ ಸಿಟಿಯಲ್ಲಿ ಮನೆ ಕಳ್ಳತನ ಮಾಮೂಲು ಸುದ್ದಿಯಾಗಿ ಬಿಟ್ಟಿದೆ. ಆದರೆ ಇದೀಗ ನಗರದಲ್ಲಿ ನಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹೌದು ಸಾಕು ನಾಯಿಗಳ ಮೇಲೆ ಕಣ್ಣೀಟ್ಟ ಖರ್ತನಾಕ್ ಕಳ್ಳರು ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ನಾಯಿ ಕಳ್ಳತನ ಮಾಡುತ್ತಿದ್ದಾರೆ.
ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ೨೦ ಸಾವಿರ ಬೆಲೆಬಾಳುವ Pug ನಾಯಿಯನ್ನು ಖದೀಮರು ಕದ್ದೊಯ್ದಿದ್ದಾರೆ. ರಂಗಸ್ವಾಮಿ ಎಂಬುವವರಿಗೆ ಸೇರಿದ ನಾಯಿಯನ್ನ ಕಳೆದ ಭಾನುವಾರ ಕಳ್ಳತನ ಮಾಡಲಾಗಿದೆ.
ರಂಗಸ್ವಾಮಿ ಭಾನುವಾರ ಸಂಜೆ ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿದ್ದರು. ಆ ವೇಳೆ ಅಪರಿಚಿತ ಯುವಕ ಮನೆಗೆ ನುಗ್ಗಿ ನಾಯಿ ಕಳ್ಳತನ ನಾಯಿ ಕದಿಯುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
