ಕೊಡಗು (ಆ. 21): ಜನರಿಗೆ ಬಿಸ್ಕೆಟ್ ನೀಡಿ ಸಾಂತ್ವನ ಹೇಳುವ ಬದಲು ಅದನ್ನು ಎಸೆದು ಹೋಗಿದ್ದಾರೆ ಎಂದು ತಮ್ಮ ವಿರುದ್ಧ ಕೇಳಿ ಬಂದಿರುವ ಟೀಕೆಗೆ ರೇವಣ್ಣ ಉತ್ತರಿಸಿದ್ದಾರೆ. ‘ನಾನು ವಾಸ್ತು ಪ್ರಕಾರ ಸರಿಯಾದ ಜಾಗದಲ್ಲಿ ನಿಂತು ಜನರಿಗೆ ಬಿಸ್ಕೆಟ್ ನೀಡಿದ್ದೇನೆ. ಆಗ್ನೇಯ ಮೂಲೆಯಲ್ಲಿ ನಿಂತು ಪರಿಹಾರ ನೀಡಿದರೆ ಒಳ್ಳೆಯದಾಗಲಿದೆ ಎಂದು ಜ್ಯೋತಿಷಿಗಳು ಹೇಳಿದ್ದರು.

ಅದರಂತೆ ನಾನು ನಡೆದುಕೊಂಡಿದ್ದೇನೆ. ಜಾಗದಿಂದ ಕದಲಿದರೆ ವಾಸ್ತುವಿಗೆ ಅಪಚಾರ ಆಗುತ್ತಿತ್ತು. ಅಲ್ಲದೇ ರಾಹುಕಾಲಕ್ಕೂ ಮುನ್ನ ಬಿಸ್ಕೆಟ್ ಹಂಚಬೇಕಾಗಿತ್ತು. ಹೀಗಾಗಿ ಗಡಿಬಿಡಿಯಲ್ಲಿ ಅದನ್ನು ನೀಡಬೇಕಾಗಿ ಬಂತು. ಆದರೆ, ಅದನ್ನೇ ಎಲ್ಲರೂ ತಪ್ಪಾಗಿ ಭಾವಿಸಿದ್ದಾರೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ’ ಎಂದು ರೇವಣ್ಣ ಅವರು ಸುಳ್‌ಸುದ್ದಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಪ್ರಾಣಿಗಳಿಗೆ ಎಸೆಯೋ ರೀತಿ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಅವಮಾನಿಸಿದ ಸಚಿವ ರೇವಣ್ಣ! 

ಸಂತ್ರಸ್ತರಿಗೆ ಅವಮಾನ | #ಕ್ಷಮೆ_ಕೇಳಿ_ರೇವಣ್ಣ: ಜನರಿಂದ ಆಗ್ರಹ