ಇನ್ನು ವಿವಾದದಲ್ಲಿ ಸಿಲುಕಿರುವ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ  ಬರುತ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ.

ಬೆಂಗಳೂರು (ಅ.17): ಇನ್ನು ವಿವಾದದಲ್ಲಿ ಸಿಲುಕಿರುವ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಬರುತ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶೇಷ ಅಧಿವೇಶನ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ವಿಧಾನಸಭೆ ಸಚಿವಾಲಯದ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಹೀಗಾಗಿ ರಾಷ್ಟ್ರಪತಿ ಬರ್ತಾರಾ ಅನ್ನೋ ಪ್ರಶ್ನೆ ಕೂಡಾ ಉದ್ಭವ ಅಗಿದೆ. ವಿಶೇಷ ಅಧಿವೇಶನದ ಸಂಧರ್ಭದಲ್ಲಿ ರಾಷ್ಟ್ರಪತಿಗಳನ್ನು ಕರೆಸುವ ಸಂಪ್ರದಾಯವನ್ನು ಈ ಬಾರಿಯೂ ಪಾಲನೆ ಮಾಡಲಾಗ್ತಿದೆ ಎಂಬುದು ವಿಧಾನಸಭೆ ಸಚಿವಾಲಯದ ವಾದ. ರಾಷ್ಟ್ರಪತಿಗಳು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಯಾವುದೇ ವಿವಾದ ಇರಬಾರದು. ವಿವಾದ ಇಲ್ಲದಿದ್ದರೆ ಮಾತ್ರ ಪಾಲ್ಗೊಳ್ಳುವ ಸಂಪ್ರದಾಯ ಇದೆ. ಆದರೆ ವಿಧಾನಸೌಧ ವಜ್ರಮಹೋತ್ಸವ ವಿಶೇಷ ಅಧಿವೇಶನ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ವಿಧಾನಸಭೆ ಸಚಿವಾಲಯದ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಹೀಗಾಗಿ ರಾಷ್ಟ್ರಪತಿ ಬರ್ತಾರಾ ಅನ್ನೋ ಪ್ರಶ್ನೆ ಕೂಡಾ ಉದ್ಭವ ಅಗಿದೆ. ಅದ್ದೂರಿ ಆಚರಣೆ, ಖರ್ಚು ವೆಚ್ಚ ವಿಚಾರದಲ್ಲಿ ವೈಯಕ್ತಿಕ ಪ್ರತಿಷ್ಠೆಯ ವಿಚಾರವಾಗಿ ಪರಿವರ್ತನೆಗೊಂಡಿದೆ ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮ. ಹೀಗಾಗಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಬರ್ತಾರಾ ಅನ್ನೋದು ಕುತೂಹಲ ಮೂಡಿಸಿದೆ..