ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು  ಸುಪಾರಿ ಕಿಲ್ಲರ್ಸ್'ಗಳೇ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸೆಕ್ಸೆನಾ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು (ಅ.11): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸುಪಾರಿ ಕಿಲ್ಲರ್ಸ್'ಗಳೇ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸೆಕ್ಸೆನಾ ಅಭಿಪ್ರಾಯಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ವಿಜಯಪುರದಲ್ಲಿ ಮಾತನಾಡಿ, ಸುಪಾರಿ ಕಿಲ್ಲರ್ ಗಳು ಸುಳಿವು ಬಿಟ್ಟು ಕೊಡುವುದಿಲ್ಲ. ಅಲ್ಲದೇ ಹಣವೇ ಸುಪಾರಿ ಹಂತಕರ ಮುಖ್ಯ ಉದ್ದೇಶ. ಹಾಗಾಗಿ ಗೌರಿ ಹತ್ಯೆ ಹಣಕ್ಕಾಗಿಯೇ ನಡೆದಿದೆ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಇನ್ನು ಸುಪಾರಿ ಹಂತಕರೇ ಗೌರಿ ಹತ್ಯೆ ಮಾಡಿದ್ದರೇ ಸಿಗೋದು ಕಷ್ಟ. ಆದರೂ ಪೊಲೀಸರು ಬೇಗನೇ ಹಂತಕರನ್ನ ಪತ್ತೆ ಮಾಡುತ್ತಾರೆ ಅನ್ನೊ ನಂಬಿಕೆ ಇದೆ ಎಂದರು. ಹಾಗೇ ಗೌರಿ ಹತ್ಯೆಗೆ ಕಂಟ್ರಿ ಪಿಸ್ತೂಲು ಬಳಕೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಗೌರಿ ಹತ್ಯೆಗೂ ವಿಜಯಪುರಕ್ಕೂ ನಂಟಿದೆ ಎಂದು ತಿಳಿಸಿದರು.