ಅಳಿಯ ವೀರೇಂದ್ರ ಪರ ನಟ ದೊಡ್ಡಣ್ಣ ಪ್ರಚಾರ

First Published 12, Apr 2018, 7:13 AM IST
Doddanna Election Campaign
Highlights

ವೀರೇಂದ್ರ ಇದ್ದಾನಲ್ಲ, ಅಂದ್ರೆ ಪಪ್ಪಿ ನನ್ನ ಅಳಿಯ ಕಣ್ರವ್ವ. ವೋಟು ಹಾಕಿ ವಿಧಾನಸೌಧಕ್ಕೆ ಕಳಿಸಿ. ನಿಮ್‌ ಹಳ್ಳಿಗಳು ಹೆಂಗೆ ಉದ್ಧಾರ ಮಾಡ್ತಾನೆ ನೋಡ್ತಾ ಇರಿ!

ಚಿತ್ರದುರ್ಗ : ವೀರೇಂದ್ರ ಇದ್ದಾನಲ್ಲ, ಅಂದ್ರೆ ಪಪ್ಪಿ ನನ್ನ ಅಳಿಯ ಕಣ್ರವ್ವ. ವೋಟು ಹಾಕಿ ವಿಧಾನಸೌಧಕ್ಕೆ ಕಳಿಸಿ. ನಿಮ್‌ ಹಳ್ಳಿಗಳು ಹೆಂಗೆ ಉದ್ಧಾರ ಮಾಡ್ತಾನೆ ನೋಡ್ತಾ ಇರಿ!

ಹಾಸ್ಯ ನಟ ದೊಡ್ಡಣ್ಣ ಚಿತ್ರದುರ್ಗದ ಹಳ್ಳಿಗಳಿಗೆ ತೆರಳಿ ಮಹಿಳೆಯರ ಮುಂದೆ ನಿವೇದಿಸಿಕೊಳ್ಳುತ್ತಿರುವ ಪರಿ ಇದು. ಚಿತ್ರದುರ್ಗ ವಿಧಾನಸಭೆ ಚುನಾವಣೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿರುವ ಉದ್ಯಮಿ ಕೆ.ಸಿ.ವೀರೇಂದ್ರ ಪರ ಮಾವ ದೊಡ್ಡಣ್ಣ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ದೊಡ್ಡಣ್ಣ ಹಳ್ಳಿಗಳಿಗೆ ಹೋಗುತ್ತಿದ್ದಂತೆ ಜನ, ಯುವಕರು ಮುತ್ತಿ ಕೊಳ್ಳುತ್ತಿದ್ದಾರೆ. ‘ಚೆಂದಾಕಿದ್ದೀರವ್ವ ’ಎಂದು ಮಾತಿಗಿಳಿಯುವ ದೊಡ್ಡಣ್ಣ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಮತ ಯಾಚಿಸುತ್ತಿದ್ದಾರೆ. ತೆನೆಹೊತ್ತ ಮಹಿಳೆಗೆ ಮತ ಹಾಕೋದ ಮರಿಬೇಡಿ. ನಿಮ್ಮ ಸಮಸ್ಯೆ ಹೊರೆ ಇಳಿಸಲು ನಮ್ಮ ಪಪ್ಪಿ ಇರ್ತಾನೆ ಎನ್ನುತ್ತಿದ್ದಾರೆ. ಸಿನಿಮಾಗಳಲ್ಲಿ ರಾಜಕಾರಣಿ ಪಾತ್ರ ಮಾಡಿ ನಿರರ್ಗಳ ಭಾಷಣ ಮಾಡುವ ಅಭ್ಯಾಸ ಮಾಡಿಕೊಂಡಿರುವ ದೊಡ್ಡಣ್ಣ ಅದೇ ಸಿನಿಮಾ ಡೈಲಾಗ್‌ ಗಳ ಜನರ ಮುಂದೆ ಹರಿಯಬಿಡುತ್ತಿದ್ದಾರೆ.

ಆದರೆ, ಮಾವ ಮತ್ತು ಅಳಿಯ ಜೊತೆಗೆ ಹೋಗದೆ ಪ್ರತ್ಯೇಕವಾಗಿ ಹಳ್ಳಿಗಳ ಸುತ್ತುತ್ತಿರುವುದು ಮತ್ತೊಂದು ವಿಶೇಷ.

loader