ಅಂತರ್ಧರ್ಮ ವಿವಾಹಗಳು ಮತ್ತು ಮತಾಂತರಕ್ಕೂ ಮುನ್ನಾ ಜಿಲ್ಲಾಧಿಕಾರಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ರಾಜಸ್ಥಾನ ಹೈಕೋರ್ಟ್ ತಿಳಿಸಿದೆ.
ಜೈಪುರ (ಡಿ.17): ಅಂತರ್ಧರ್ಮ ವಿವಾಹಗಳು ಮತ್ತು ಮತಾಂತರಕ್ಕೂ ಮುನ್ನಾ ಜಿಲ್ಲಾಧಿಕಾರಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ರಾಜಸ್ಥಾನ ಹೈಕೋರ್ಟ್ ತಿಳಿಸಿದೆ. ಪಾಯಲ್ ಎಂಬಾಕೆಯನ್ನು ವಿವಾಹವಾಗುವುದಕ್ಕೆ ಫೈಜಿ ಮೋದಿ ಎಂಬಾತ ಆಕೆಯನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿ `ಲವ್ ಜಿಹಾದ್' ನಡೆಸಿರುವುದಾಗಿ ಆಪಾದಿಸಿ, ಆಕೆಯ ಸಹೋದರ ಚಿರಾಗ್ ಸಿಂಘ್ವಿ ಎಂಬವರು ದಾಖಲಿಸಿದ್ದ `ಹೇಬಿಯಸ್ ಕಾರ್ಪಸ್' ಅರ್ಜಿ ವಿಚಾರಣೆ ವೇಳೆ ಕೋರ್ಟ್ ಹತ್ತು ಅಂಶಗಳ ಮಾರ್ಗಸೂಚಿಯನ್ನು ನೀಡಿದೆ.
ಅಂತರ್ ಧರ್ಮೀಯ ವಿವಾಹ ಮತ್ತು ಮತಾಂತರಕ್ಕೂ ಮೊದಲು ಸಲ್ಲಿಸಬೇಕಾದ ದಾಖಲೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಇವುಗಳಲ್ಲಿ ಸೇರಿವೆ. ಸರ್ಕಾರ ಈ ಸಂಬಂಧ ಸೂಕ್ತ ಕಾನೂನುಗಳನ್ನು ತರುವವರೆಗೆ ಈ ಮಾರ್ಗಸೂಚಿ ಚಾಲ್ತಿಯಲ್ಲಿರಲಿದೆ ಎಂದು ಕೋರ್ಟ್ ತಿಳಿಸಿದೆ.
ಇನ್ನೊಂದು ಧರ್ಮಕ್ಕೆ ಮತಾಂತರವಾಗ ಬಯಸುವ ವ್ಯಕ್ತಿಗಳು ಜಿಲ್ಲಾಕಾರಿ/ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಥವಾ ಅಧಿಕಾರಿಗೆ ಮಾಹಿತಿಯನ್ನು ನೀಡಬೇಕು. ಅವರು ತಮ್ಮ ನೋಟಿಸ್ ಬೋರ್ಡ್ಗಳಲ್ಲಿ ಈ ಸಂಬಂಧ ಮಾಹಿತಿ ಹಾಕುತ್ತಾರೆ.
