Asianet Suvarna News Asianet Suvarna News

ಇಂದು ಮತ್ತೆ ದೇಶದಾದ್ಯಂತ ವೈದ್ಯರ ಪ್ರತಿಭಟನೆ

ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ರದ್ದು ಮಾಡಿ ಅದರ ಬದಲು ರಾಷ್ಟ್ರೀಯ ವೈದ್ಯ ಆಯೋಗ (ಎನ್ಎಂಸಿ) ರಚಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ- 2017 ’ನ್ನು ವಿರೋಧಿಸಿ ಇಂದು ದೇಶಾದ್ಯಂತ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಇಂದು ವೈದ್ಯರು ನಿರ್ಧರಿಸಿದ್ದಾರೆ.

Doctors Protest Today

ನವದೆಹಲಿ: ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ರದ್ದು ಮಾಡಿ ಅದರ ಬದಲು ರಾಷ್ಟ್ರೀಯ ವೈದ್ಯ ಆಯೋಗ (ಎನ್ಎಂಸಿ) ರಚಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ- 2017 ’ನ್ನು ವಿರೋಧಿಸಿ ಇಂದು ದೇಶಾದ್ಯಂತ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಇಂದು ವೈದ್ಯರು ನಿರ್ಧರಿಸಿದ್ದಾರೆ.

 ಭಾರತೀಯ ವೈದ್ಯಕೀಯ ಸಂಘ (ಐಎಂಎ) ಈ ಬಂದ್‌ಗೆ ಕರೆ ನೀಡಿದೆ. ಎಂಸಿ ಎದಲ್ಲಿ 2.77 ಲಕ್ಷ ವೈದ್ಯ ಸದಸ್ಯರಿದ್ದಾರೆ. ಮುಷ್ಕರಕ್ಕೆ ಐಎಂಎ ಕರೆ ನೀಡಿದ್ದು, ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ (ಒಪಿಡಿ) ಬಂದ್ ಆಗಲಿವೆ. ಆದರೆ ತುರ್ತು ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಕಳೆದ ಶುಕ್ರವಾರವೇ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು,  ವಿಧೇಯಕದ ಅನುಸಾರ ಭ್ರಷ್ಟಾಚಾರದ ಆರೋಪ ಹೊತ್ತಿರುವ ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ರದ್ದಾಗಲಿದ್ದು, ಆ ಜಾಗಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಅಸ್ತಿತ್ವಕ್ಕೆ ಬರಲಿದೆ.

Follow Us:
Download App:
  • android
  • ios