ಖತರ್ನಾಕ್ ಕಳ್ಳನೊಬ್ಬ ಡಾಕ್ಟರ್ ಬಳಿಯೇ ತನ್ನ ಕೈಚಳಕ ತೋರಿಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.  ಡಾಕ್ಟರ್ ಇತರೇ ರೋಗಿಗಳನ್ನು ಪರೀಕ್ಷೆ ಮಾಡುತ್ತಿರುವಾಗಲೇ ಯಾವುದೋ ಮಾಯದಲ್ಲಿ ಅವರ ಪರ್ಸ್​ ಇರುವ ಲೆದರ್ ಬ್ಯಾಗನ್ನೇ ಕದ್ದು ಬಿಟ್ಟಿದ್ದ. ಈ ರೋಗಿ ಮಹಾಶಯನ ಕೈಚಳಕದಿಂದ ವೈದ್ಯರ ಬ್ಯಾಗಿನಲ್ಲಿದ್ದ ಹಣದ ಜೊತೆಗೆ ಪರೀಕ್ಷಾ ಉಪಕರಣಗಳು ನಾಪತ್ತೆಯಾಗಿದ್ದವು. ಎಲ್ಲಪ್ಪಾ ನನ್ನ ಬ್ಯಾಗ್ ಎಂದು ವೈದ್ಯರು ತಲೆಕೆಡಿಸಿಕೊಳ್ಳುತ್ತಿರುವಾಗಲೇ ಅಸ್ಪತ್ರೆಯ ಬಾತ್ ರೂಮ್ ಬಳಿ ವೈದ್ಯರ ಬ್ಯಾಗ್ ಪತ್ತೆಯಾಗಿತ್ತು. ಆದರೆ ಬ್ಯಾಗ್ ನಲ್ಲಿದ್ದ ಉಪಕರಣಗಳೇನೋ ಇದ್ದವಾದರೂ 2 ಸಾವಿರ ರೂ. ಹಣ ಕಣ್ಮರೆಯಾಗಿತ್ತು. ಯಾರು ಈ ಖತರ್ ನಾಕ್ ಕಳ್ಳ ಎಂದು ವೈದ್ಯರ ಕೊಠಡಿಯ ಹೊರಗೆ ಆಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳ್ಳನ ಈ ಕೈಚಳಕ, ಕಳ್ಳತನಕ್ಕಾಗಿ ನಡೆಸಿದ ತಾಲೀಮು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಶಿವಮೊಗ್ಗ (ಅ.15): ಖತರ್ನಾಕ್ ಕಳ್ಳನೊಬ್ಬ ಡಾಕ್ಟರ್ ಬಳಿಯೇ ತನ್ನ ಕೈಚಳಕ ತೋರಿಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಡಾಕ್ಟರ್ ಇತರೇ ರೋಗಿಗಳನ್ನು ಪರೀಕ್ಷೆ ಮಾಡುತ್ತಿರುವಾಗಲೇ ಯಾವುದೋ ಮಾಯದಲ್ಲಿ ಅವರ ಪರ್ಸ್​ ಇರುವ ಲೆದರ್ ಬ್ಯಾಗನ್ನೇ ಕದ್ದು ಬಿಟ್ಟಿದ್ದ. ಈ ರೋಗಿ ಮಹಾಶಯನ ಕೈಚಳಕದಿಂದ ವೈದ್ಯರ ಬ್ಯಾಗಿನಲ್ಲಿದ್ದ ಹಣದ ಜೊತೆಗೆ ಪರೀಕ್ಷಾ ಉಪಕರಣಗಳು ನಾಪತ್ತೆಯಾಗಿದ್ದವು. ಎಲ್ಲಪ್ಪಾ ನನ್ನ ಬ್ಯಾಗ್ ಎಂದು ವೈದ್ಯರು ತಲೆಕೆಡಿಸಿಕೊಳ್ಳುತ್ತಿರುವಾಗಲೇ ಅಸ್ಪತ್ರೆಯ ಬಾತ್ ರೂಮ್ ಬಳಿ ವೈದ್ಯರ ಬ್ಯಾಗ್ ಪತ್ತೆಯಾಗಿತ್ತು. ಆದರೆ ಬ್ಯಾಗ್ ನಲ್ಲಿದ್ದ ಉಪಕರಣಗಳೇನೋ ಇದ್ದವಾದರೂ 2 ಸಾವಿರ ರೂ. ಹಣ ಕಣ್ಮರೆಯಾಗಿತ್ತು. ಯಾರು ಈ ಖತರ್ ನಾಕ್ ಕಳ್ಳ ಎಂದು ವೈದ್ಯರ ಕೊಠಡಿಯ ಹೊರಗೆ ಆಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳ್ಳನ ಈ ಕೈಚಳಕ, ಕಳ್ಳತನಕ್ಕಾಗಿ ನಡೆಸಿದ ತಾಲೀಮು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇದು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಅಸ್ಪತ್ರೆಯ ಕಿವಿ - ಮೂಗು - ಗಂಟಲು ವಿಭಾಗದ ವೈದ್ಯಕೀಯ ವಿಭಾಗದಲ್ಲಿ ವೈದ್ಯೆ ಚೈತ್ರ ಎಂಬುವವರು ರೋಗಿಗಳನ್ನು ಪರೀಕ್ಷೆ ನಡೆಸುತ್ತಿದ್ದಾಗ ನಡೆದ ಘಟನೆ. ಇಡಿ ಮೆಗ್ಗಾನ್ ಅಸ್ಪತ್ರೆಯ ಕಾರಿಡಾರ್’ಗಳಲ್ಲಿ ಆಳವಡಿಸಿದ್ದ ಸಿಸಿ ಕ್ಯಾಮರಾಗಳು ಪೆಶೆಂಟ್ ಕಮ್ ಕಳ್ಳನ ಕರಾಮತ್ತಿನ ದೃಶ್ಯಗಳನ್ನು ಸೆರೆ ಹಿಡಿದಿತ್ತು. ಕೆಂಪು ಬಣ್ಣದ ಬ್ಯಾಗನ್ನು ಹಿಡಿದು ಬರುವ ಕಳ್ಳ ಪೆಶೆಂಟ್ ನಂತರ ವೈದ್ಯರ ಕೊಠಡಿಯ ಒಳಗೆ - ಹೊರಗೆ ಸಂಚರಿಸಿ ಕಾರಿಡಾರ್ ನ್ನು ವೀಕ್ಷಿಸಿ ಕೊನೆಗೆ ತನ್ನ ಕೆಂಪು ಬಣ್ಣದ ಬ್ಯಾಗಿನ ಹಿಂದೆ ವೈದ್ಯೆಯ ಲೆದರ್ ಬ್ಯಾಗ್ ಮುಚ್ಚಿಟ್ಟುಕೊಂಡು ಹೋಗುತ್ತಾನೆ. ಇದೀಗ ಮೆಗ್ಗಾನ್ ವೈದ್ಯಕೀಯ ಅಧೀಕ್ಷಕ ಡಾ.ಸತ್ಯನಾರಾಯಣ್ ದೊಡ್ಡಪೇಟೆ ಪೋಲಿಸರಿಗೆ ಸಿಸಿ ಕ್ಯಾಮರಾ ದೃಶ್ಯಗಳನ್ನು ಕೊಟ್ಟು ಕಳ್ಳನ ಪತ್ತೆಗೆ ಕೋರಿದ್ದಾರೆ. ಎಷ್ಟೇ ಸೆಕ್ಯೂರಿಟಿ ಇದ್ದರೂ , ಸಿಸಿ ಕ್ಯಾಮರಾಗಳಿದ್ದರೂ ಕಳ್ಳರು ಮಾತ್ರ ತಮ್ಮ ಕೈಚಳಕ ತೋರಿಸುವುದು ತಪ್ಪಲ್ಲ ಎಂಬುದೇ ವಿಪರ್ಯಾಸ.