ನವದೆಹಲಿ (ಮಾ. 12): ನಿಮಗೆ ಪ್ರೀತಿ, ಭ್ರಾತೃತ್ವದ ಮಹಾತ್ಮ ಗಾಂಧೀಜಿ ಅವರ ಭಾರತ ಬೇಕೋ? ಅಥವಾ ದ್ವೇಷ ಮತ್ತು ಭಯದ ಗೋಡ್ಸೆಯ ಭಾರತ ಬೇಕೋ? ಈ ಎರಡರಲ್ಲಿ ಒಂದನ್ನು ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮೇಲ್ವರ್ಗ ಮೀಸಲು ದಾವೆ ಸಂವಿಧಾನ ಪೀಠಕ್ಕೆ ಈಗಲೇ ಇಲ್ಲ

ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯನ್ನು ಗೋಡ್ಸೆಯ ಭಾರತಕ್ಕೆ ಹೋಲಿಸಿದ್ದಾರೆ. ಇದೇ ವೇಳೆ, ರಫೇಲ್ ಒಪ್ಪಂದ, ಉದ್ಯೋಗ ಸೃಷ್ಟಿ, ರಾಷ್ಟ್ರೀಯ ಭದ್ರತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.