ಬಿಹಾರದಲ್ಲಿ ಮದ್ಯ ನಿಷೇಧವಾದ ನಂತರ ರಾಜ್ಯದಲ್ಲಿದ್ದ ಎಲ್ಲ ಮದ್ಯವನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿತ್ತು. ಆದರೆ ಗೋದಾಮಿ​ನಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯ ಖಾಲಿಯಾಗಿದ್ದೇಗೆ ಎಂದು ಮಾಧ್ಯಮಗಳು ಪ್ರಶ್ನೆ ಎತ್ತಿದ್ದವು. ಇದಕ್ಕೆ ಪೊಲೀಸರು ಕೊಟ್ಟ ಉತ್ತರ ಮದ್ಯವನ್ನು ಇಲಿಗಳು ಕುಡಿದಿವೆ. ಅದು 9 ಲಕ್ಷ ಲೀಟರ್ ಮದ್ಯ ಎಂದು ಹೇಳುವ ಮೂಲಕ ಭಾರೀ ಪೇಚಿಗೆ ಸಿಲುಕಿದ್ದಾರೆ.

ಪಾಟ್ನಾ (ಮೇ.05): ಇಲಿಗಳು ಮದ್ಯ ಕುಡಿಯುತ್ತವಾ? ಅದು 9 ಲಕ್ಷ ಲೀಟರ್ ಸಾಧ್ಯವಾ? ನಮ್ಮನ್ನು ನಿಮ್ಮನ್ನು ಕೇಳಿದ್ರೆ ಸಾಧ್ಯವೇ ಇಲ್ಲ ಅನ್ನುತ್ತೇವೆ. ಆದರೆ ಬಿಹಾರದ ಪೊಲೀಸರು ಮಾತ್ರ ಇಲ್ಲ ಇಲಿಗಳೇ 9 ಲಕ್ಷ ಲೀಟರ್​ ಮದ್ಯವನ್ನು ಕುಡಿದಿವೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಮದ್ಯ ನಿಷೇಧವಾದ ನಂತರ ರಾಜ್ಯದಲ್ಲಿದ್ದ ಎಲ್ಲ ಮದ್ಯವನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿತ್ತು. ಆದರೆ ಗೋದಾಮಿ​ನಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯ ಖಾಲಿಯಾಗಿದ್ದೇಗೆ ಎಂದು ಮಾಧ್ಯಮಗಳು ಪ್ರಶ್ನೆ ಎತ್ತಿದ್ದವು. ಇದಕ್ಕೆ ಪೊಲೀಸರು ಕೊಟ್ಟ ಉತ್ತರ ಮದ್ಯವನ್ನು ಇಲಿಗಳು ಕುಡಿದಿವೆ. ಅದು 9 ಲಕ್ಷ ಲೀಟರ್ ಮದ್ಯ ಎಂದು ಹೇಳುವ ಮೂಲಕ ಭಾರೀ ಪೇಚಿಗೆ ಸಿಲುಕಿದ್ದಾರೆ.

ಬಿಹಾರ ಪೊಲೀಸರ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಕ್ಕೆ ಆಹಾರವಾಗಿದೆ. ಟ್ವೀಟರ್​ನಲ್ಲಂತೂ ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದ ಮದ್ಯ ಎಲ್ಲೋಯ್ತು ಅನ್ನೋದು ಬಾಹುಬಲಿಯನ್ನ ಕಟ್ಟಪ್ಪ ಏಕೆ ಕೊಂದ ಅನ್ನೋದಕ್ಕಿಂತಲೂ ನಿಗೂಢವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.