ನವದೆಹಲಿ (ಅ.1); ಕಾವೇರಿ ತೀರ್ಪಿಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದು ಸುಪ್ರೀಂಕೋರ್ಟ್ ಮೇಲೆ ಪಕ್ಷಪಾತದ ಟೀಕೆ ಬೇಡ. ಕಾನೂನು ತಂತ್ರ ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.

ಕಾವೇರಿ ಕೊಳ್ಳದಲ್ಲಿ ಸ್ಥಿತಿಗತಿ ಪರಿಶೀಲಿಸಿ ತಜ್ಞರು ವರದಿಯನ್ನು ನೀಡಬೇಕು. ಸಂಕಷ್ಟ ಸ್ಥಿತಿಯಲ್ಲೂ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಟ್ಟಿದ್ದೇವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ನಮ್ಮ ವಕೀಲರು ನ್ಯಾಯಾಲಯದಲ್ಲಿ ವಾದವನ್ನೇ ಮಾಡಿಲ್ಲ. ವಕೀಲರ ತಂಡದ ಈ ವರ್ತನೆಯೇ ನಮ್ಮ ವೈಫಕ್ಕೆ ಕಾರಣ. ಸರ್ಕಾರ ಪದೇ ಪದೇ ಕಾನೂನು ತಂತ್ರ ರೂಪಿಸುವಲ್ಲಿ ಎಡವುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.