ತನ್ನ ತಂದೆಯ ತ್ಯಾಗವನ್ನು ಅವಮಾನಿಸಬೇಡಿ. ದೇಶ ಹಾಗೂ ಇಲ್ಲಿನ ಜನರಿಗಾಗಿ ತಮ್ಮ ಪ್ರಾಣವನ್ನು ಕೊಟ್ಟಿರುವವರನ್ನು ಟೀಕಿಸಬೇಡಿ, ಎಂದು ಪೂಜಾ ಹೇಳಿದ್ದಾರೆ.
ನವದೆಹಲಿ (ಮಾ.03): ತನ್ನ ತಂದೆಯ ತ್ಯಾಗ-ಬಲಿದಾನಗಳಿಗೆ ಅವಮಾನ ಮಾಡದಿರುವಂತೆ ಕಾರ್ಗಿಲ್ ಹುತಾತ್ಮ ಪುತ್ರಿ ಗುರ್’ಮೆಹರ್ ಸಿಂಗ್’ಗೆ ಪಠಾಣ್’ಕೋಟ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಲ್ಯಾನ್ಸ್’ನಾಯಕ್ ಮೂಲ್’ರಾಜ್ ಅವರ ಪುತ್ರಿ ಪೂಜಾ ಮನವಿ ಮಾಡಿಕೊಂಡಿದ್ದಾರೆ.
ತನ್ನ ತಂದೆಯ ತ್ಯಾಗವನ್ನು ಅವಮಾನಿಸಬೇಡಿ. ದೇಶ ಹಾಗೂ ಇಲ್ಲಿನ ಜನರಿಗಾಗಿ ತಮ್ಮ ಪ್ರಾಣವನ್ನು ಕೊಟ್ಟಿರುವವರನ್ನು ಟೀಕಿಸಬೇಡಿ, ಎಂದು ಪೂಜಾ ಹೇಳಿದ್ದಾರೆ.
ಏಬಿವಿಪಿಯ ವಿರುದ್ಧ ಗುರ್’ಮೆಹರ್ ಪ್ರತಿಭಟನಾ ಹೇಳಿಕೆಯು ಕಳೆದ ವಾರದಿಂದ ವೈರಲ್ ಆಗಿದ್ದು, ದೇಶಾದ್ಯಂತ ಚರ್ಚೆಗೆ ನಾಂದಿ ಹಾಡಿದೆ. ‘ಪಾಕಿಸ್ತಾನ ನನ್ನ ತಂದೆಯನ್ನು ಕೊಂದಿಲ್ಲ, ಬದಲಾಗಿ ಯುದ್ದವು ಕೊಂದಿದೆ’ ಎಂದು ಭಿತ್ತಿಪತ್ರ ಹಿಡಿದಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.