ಹೊಟೇಲ್'ನವರು ವಿಧಿಸುವ ಸರ್ವಿಸ್ ಚಾರ್ಜ್'ನ್ನು ಪಾವತಿಸುವುದು ಕಡ್ಡಾಯವಲ್ಲ, ಅದು ಗ್ರಾಹಕರ ವಿವೇಚನೆಗೆ ಬಿಟ್ಟದ್ದು ಎಂದು ಕೇಂದ್ರ ಸರ್ಕಾರ ನಿನ್ನೆ ಹೇಳಿತ್ತು.

ನವದೆಹಲಿ (ಜ.03): ರೆಸ್ಟೊರೆಂಟ್’ಗಳಲ್ಲಿ ಸೇವಾ ಶುಲ್ಕ ಪಾವತಿಸುವ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಹೋಟೆಲ್’ಗಳ ಒಕ್ಕೂಟವು ಸಾರಸಗಟಾಗಿ ತಳ್ಳಿಹಾಕಿದೆ.

ಸೇವಾ ಶುಲ್ಕ ಪಾವತಿಸಲು ಇಷ್ಟವಿಲ್ಲವೆಂದಾದಲ್ಲಿ, ಗ್ರಾಹಕರು ಹೋಟೆಲ್’ಗಳಲ್ಲಿ ತಿನ್ನಲೇಬೇಕೆಂದಿಲ್ಲ ಎಂದು ಭಾರತೀಯ ಹೋಟೆಲ್’ಗಳ ಸಂಘವು ಹೇಳಿದೆ. ತನ್ನ ವಾದವನ್ನು ಸಮರ್ಥಿಸಲು ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡಾ ಉಲ್ಲೇಖಿಸಿದೆ.

ಹೊಟೇಲ್'ನವರು ವಿಧಿಸುವ ಸರ್ವಿಸ್ ಚಾರ್ಜ್'ನ್ನು ಪಾವತಿಸುವುದು ಕಡ್ಡಾಯವಲ್ಲ, ಅದು ಗ್ರಾಹಕರ ವಿವೇಚನೆಗೆ ಬಿಟ್ಟದ್ದು ಎಂದು ಕೇಂದ್ರ ಸರ್ಕಾರ ನಿನ್ನೆ ಹೇಳಿತ್ತು.

ಹೊಟೇಲ್'ಗಳಲ್ಲಿ ಸುಖಾಸುಮ್ಮನೆ ಬೇಕಾಬಿಟ್ಟಿ ಸರ್ವಿಸ್ ಚಾರ್ಜ್'ಗಳನ್ನು ವಿಧಿಸಲಾಗುತ್ತಿದೆ ಎಂಬ ದೂರುಗಳು ಹೆಚ್ಚು ಸಂಖ್ಯೆಯಲ್ಲಿ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸರಕಾರ ಈ ನಿಯಮ ಹೊರಡಿಸಿದೆ.

ಹೊಟೇಲ್'ಗಳಲ್ಲಿ ಸಾಮಾನ್ಯವಾಗಿ ಶೇ.5ರಿಂದ 20ರಷ್ಟು ಸರ್ವಿಸ್ ಚಾರ್ಜ್ ಹೇರಲಾಗುತ್ತದೆ. 1986ರ ಗ್ರಾಹಕ ಹಿತರಕ್ಷಣಾ ಕಾಯ್ದೆ ಪ್ರಕಾರ ಗ್ರಾಹಕರ ಮೇಲೆ ಇಂತಹ ಶುಲ್ಕಗಳನ್ನು ಕಡ್ಡಾಯಗೊಳಿಸುವಂತಿಲ್ಲಎ ದು ಸರ್ಕಾರ ಹೇಳಿತ್ತು.

(ಸಾಂದರ್ಭಿಕ ಚಿತ್ರ)