ಸಾರ್ವಜನಿಕ ಪಡಿತರ ನಿರಾಕರಿಸಿದ್ದರಿಂದ ಜಾರ್ಖಂಡ್‌'ನಲ್ಲಿ ಇತ್ತೀಚೆಗೆ 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ನವದೆಹಲಿ(ಅ.27): ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಅಥವಾ ಪಡಿತರ ಕಾರ್ಡ್‌'ನೊಂದಿಗೆ ಆಧಾರ್ ಜೋಡಿಸದ್ದಕ್ಕೆ ಪಡಿತರವನ್ನು ನಿರಾಕರಿಸಬಾರದು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಆಧಾರ್ ಹೊಂದದೇ ಇರುವ ಕಾರಣಕ್ಕೆ ಫಲಾನುಭವಿ ಕುಟುಂಬಗಳನ್ನು ಪಟ್ಟಿಯಿಂದ ತೆಗೆದುಹಾಕಬಾರದು ಎಂದು ತಿಳಿಸಿದೆ. ಈ ಸಂಬಂಧ ಎಲ್ಲಾ ರಾಜ್ಯಗಳಿಗೆ ಆಹಾರ ಸಚಿವಾಲಯ ಸುತ್ತೋಲೆ ಹೊರಡಿಸಲಾಗಿದೆ.

ಸಾರ್ವಜನಿಕ ಪಡಿತರ ನಿರಾಕರಿಸಿದ್ದರಿಂದ ಜಾರ್ಖಂಡ್‌'ನಲ್ಲಿ ಇತ್ತೀಚೆಗೆ 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.