ಐನೂರು, ಸಾವಿರ ರೂ. ನೋಟುಗಳ ನಿಷೇಧಕ್ಕೆ ಪ್ರತಿಕ್ರಿಯೆ ನೀಡಿರುವ ಆಹಾರ ಸಚಿವ ಯು.ಟಿ. ಖಾದರ್  ಜನ್ ಧನ್ ಯೋಜನೆಯಲ್ಲಿ ಬ್ಯಾಂಕ್ ಖಾತೆ ಹೊಂದಿರುವವರು ಎಚ್ಚರಿಕೆಯಿಂದ ಇರಬೇಕು. ಬೇರೆಯವರಹಣವನ್ನು ನಿಮ್ಮ ಖಾತೆಯಲ್ಲಿ ಚಲಾವಣೆ ಮಾಡಿ ತೊಂದರೆಗೆ ಸಿಲುಕಬೇಡಿ ಎಂದು ಸಾರ್ವಜನಿಕರಿಗೆ ವಿಕಾಸಸೌಧದಲ್ಲಿ ಹೇಳಿದರು.

ಬೆಂಗಳೂರು (ನ.15): ಐನೂರು, ಸಾವಿರ ರೂ. ನೋಟುಗಳ ನಿಷೇಧಕ್ಕೆ ಪ್ರತಿಕ್ರಿಯೆ ನೀಡಿರುವ ಆಹಾರ ಸಚಿವ ಯು.ಟಿ. ಖಾದರ್ ಜನ್ ಧನ್ ಯೋಜನೆಯಲ್ಲಿ ಬ್ಯಾಂಕ್ ಖಾತೆ ಹೊಂದಿರುವವರು ಎಚ್ಚರಿಕೆಯಿಂದ ಇರಬೇಕು. ಬೇರೆಯವರ

ಹಣವನ್ನು ನಿಮ್ಮ ಖಾತೆಯಲ್ಲಿ ಚಲಾವಣೆ ಮಾಡಿ ತೊಂದರೆಗೆ ಸಿಲುಕಬೇಡಿ ಎಂದು ಸಾರ್ವಜನಿಕರಿಗೆ ವಿಕಾಸಸೌಧದಲ್ಲಿ ಹೇಳಿದರು.

 ಸರ್ಕಾರ ನಿಮಗೆ ಕೊಡುತ್ತಿರುವ ಯೋಜನೆಗಳು ರದ್ದಾಗಬಹುದು. ನಿಮ್ಮ ಬಳಿ ಅಷ್ಟು ಹಣ ಇದ್ದಾಗ ನೀವು ಹೇಗೆ ಸರ್ಕಾರದ ಯೋಜನೆಗೆ ಅರ್ಹರಾಗುತ್ತೀರಾ ಅನ್ನೋ ಪ್ರಶ್ನೆ ಮೂಡುತ್ತದೆ.ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.