ಚೆನ್ನೈ, [ಫೆ.20]: ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ, ಎಐಎಡಿಎಂಕೆ ಮೈತ್ರಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್​ ಹಾಗೂ ಡಿಎಂಕೆ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. 

ಇಂದು [ಬುಧವಾರ] ಚೆನ್ನೈನಲ್ಲಿ ಸಭೆ ನಡೆಸಿದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್​ ಮತ್ತು ತಮಿಳುನಾಡು ಕಾಂಗ್ರೆಸ್​ ಉಸ್ತುವಾರಿ ಮುಕುಲ್​ ವಾಸ್ನಿಕ್​ ನೇತೃತ್ವದ  ಸೀಟು ಹಂಚಿಕೆ ಫೈನಲ್ ಆಗಿದೆ.

ತಮಿಳುನಾಡಿನಲ್ಲಿ 39 ಸೀಟುಗಳ ಪೈಕಿ 9 ಮತ್ತು ಪುದುಚೆರಿಯ ಒಂದು ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡವ ನಿರ್ಧಾರವಾಗಿದೆ.

ತಮಿಳು ರಾಜಕೀಯದಲ್ಲಿ ಹೊಸ ಅಲೆ: ಬಿಜೆಪಿ, ಎಐಎಡಿಎಂಕೆ ಮೈತ್ರಿ ಭಲೆ ಭಲೆ!

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ  ಡಿಎಂಕೆ ಪ್ರಧಾನಕಾರ್ಯದರ್ಶಿ ಸ್ಟಾಲಿನ್, 'ಕಾಂಗ್ರೆಸ್​ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದರ ಕುರಿತು ನಂತರ ನಿರ್ಧಾರ ತೆಗೆದುಕೊಳ್ಳಲಿದ್ದು,  ಶೀಘ್ರ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

2014ರ ವಿಧಾನಸಭೆ ಚುನಾವಣೆಯಲ್ಲಿ 39 ಸೀಟುಗಳ ಪೈಕಿ ಎಐಎಡಿಎಂಕೆ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಒಂದು ಮತ್ತು ಪಿಎಂಕೆ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. 

ಇನ್ನು ಡಿಎಂಕೆ ಮತ್ತು ಕಾಂಗ್ರೆಸ್​  ಮೈತ್ರಿ ಒಂದು ಸ್ಥಾನದಲ್ಲೂ ಗೆದ್ದಿರಲಿಲ್ಲ. ಈ ಬಾರಿ ಲೋಕಸಭಾ ಚುನಾವಣೆ ಏನಾಗುತ್ತೋ ಎನ್ನುವುದನ್ನು ಕಾದುನೊಡಬೇಕಿದೆ.

ಒಟ್ಟಿನಲ್ಲಿ ಈ ಬಾರಿಯ ತಮಿಳುನಾಡು ಲೋಕ ಸಮರದಲ್ಲಿ ಮೈತ್ರಿ ಫೈಟ್ ನಡೆಯೋದು ಬಹುತೇಕ ಪಕ್ಕಾ ಆದಂತಾಗಿದೆ.