ಶೈಲೇಂದ್ರ ಎಂಬುವವರಿಂದ ಪಡೆದ 5 ಕೋಟಿ ರೂ ಹಣವನ್ನು ಡಿಕೆಶಿ ನಿರ್ದೇಶನದಂತೆ ಬೇರೊಂದು ಮನೆಗೆ ಸಾಗಿಸಿದ್ದೆ. ಉಳಿದ 1.6 ಕೋಟಿ ರೂಪಾಯಿಯನ್ನು ಕಳೆದ ವಾರ ತಾನೇ ದೆಹಲಿಗೆ ತಂದು ಇಟ್ಟಿದ್ದುದಾಗಿಯೂ, ಹಣವನ್ನು ಯಾಕೆ ಸಾಗಿಸಲು ಹೇಳಿದರೆಂಬುದು ತನಗೆ ಗೊತ್ತಿಲ್ಲವೆಂದೂ ಆಂಜನೇಯ ಅವರು ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆನ್ನಲಾಗಿದೆ.
ಬೆಂಗಳೂರು(ಆ. 03): ಡಿಕೆ ಶಿವಕುಮಾರ್ ಮೇಲಿನ ಐಟಿ ರೇಡ್ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಡಿಕೆ ಶಿವಕುಮಾರ್ ಅವರ ಆಪ್ತ ಸಹಾಯಕ ಆಂಜನೇಯ ಅವರು ಐಟಿ ಅಧಿಕಾರಿಗಳಿಗೆ ಕೆಲ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಡಿಕೆಶಿ ನಿರ್ದೇಶನದ ಮೇರೆಗೆ ತಾನು ಹಣ ಸಾಗಿಸುತ್ತಿದ್ದುದನ್ನು ಆಂಜನೇಯ ಅವರು ಐಟಿ ವಿಚಾರಣೆ ವೇಳೆ ತಿಳಿಸಿದ್ದಾರೆಂದು ಟೈಮ್ಸ್ ನೌ ವಾಹಿನಿ ವರದಿ ಮಾಡಿದೆ.