ಕೆಲವರು ನಾನು ಅಧ್ಯಕ್ಷ ಆಗಬೇಕೆಂದು ಬಯಸ್ತಾರೆ.ಇನ್ನೂ ಕೆಲವರು ನಾನು ಅಧ್ಯಕ್ಷ ಆಗೋದೇ ಬೇಡಾ ಅಂತಾರೆ.
ಬೆಂಗಳೂರು(ಏ.17): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ. ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕ್ಕೊಂಡು ಕುಳಿತಿಲ್ಲ.ಕೆಲವರು ಮುಂದೆ ಚೆನ್ನಾಗಿ ಮಾತಾಡಿ, ಹಿಂದೆ ಪಿತೂರಿ ಮಾಡುತ್ತಾರೆ. ಕೆಲವರು ನಾನು ಅಧ್ಯಕ್ಷ ಆಗಬೇಕೆಂದು ಬಯಸ್ತಾರೆ.ಇನ್ನೂ ಕೆಲವರು ನಾನು ಅಧ್ಯಕ್ಷ ಆಗೋದೇ ಬೇಡಾ ಅಂತಾರೆ. ಅಧ್ಯಕ್ಷ ಸ್ಥಾನಕ್ಕಾಗಿ ಹೈಕಮಾಂಡ್ ಬಳಿ ಯಾವುದೇ ಕಾರಣಕ್ಕೂ ಹೋಗಲ್ಲ.
ಹೈಕಮಾಂಡ್ ಮತ್ತು ಸಿಎಂ ಕೊಟ್ಟ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ. ಯಾರಾದರೂ ಅಧ್ಯಕ್ಷರಾಗಲಿ, ನನಗೆ ಬೇಸರವಿಲ್ಲ. ನನ್ನ ನೇಮಕ ಬೇಡ ಎಂದು ಸಿಎಂ ಎಲ್ಲಿಯೂ ಹೇಳಿಲ್ಲ. ನಾನು ಅಧ್ಯಕ್ಷ ಆದರೆ ಸಿಎಂ ವಿರೋಧಿಸ್ತಾರೆ ಅನ್ನೋದು ಸುಳ್ಳು. ಎಲ್ಲರೂ ಒಪ್ಪಿದರೆ ಅಧ್ಯಕ್ಷನಾಗಲು ಒಪ್ಪುವೆ, ಇಲ್ಲಾಂದ್ರೆ ಇಲ್ಲ. ಕೆಲವರು ನಾನು ಬಹಳ ಹಿರಿಯ ಎಂದು ಹೇಳಿಕೊಂಡು ಲಾಬಿ ನಡೆಸಿದ್ದಾರೆ ಎಂದು ಕೆ. ಹೆಚ್. ಮುನಿಯಪ್ಪ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ ನಡೆಸಿದರು.
