ಸಿಎಂ ಕಚೇರಿಯಲ್ಲಿ ಇಬ್ಬರೇ ಕುಳಿತು 20 ನಿಮಿಷಗಳ ಕಾಲ ಗುಪ್ತ್ ಗುಪ್ತ್ ಮಾತುಕತೆಯಾಡಿದ್ದಾರೆ
ಬೆಂಗಳೂರು(ಆ.07): ಇಂದು ಸಚಿವ ಸಂಪುಟಸಭೆ ನಡೆದ ನಂತರ ಸಿಎಂ ಹಾಗೂ ಇಂಧನ ಸಚಿವ ರಹಸ್ಯ ಚರ್ಚೆ ನಡೆಸಿದ್ದಾರೆ.
ಸಿಎಂ ಕಚೇರಿಯಲ್ಲಿ ಇಬ್ಬರೇ ಕುಳಿತು 20 ನಿಮಿಷಗಳ ಕಾಲ ಗುಪ್ತ್ ಗುಪ್ತ್ ಮಾತುಕತೆಯಾಡಿದ್ದಾರೆ. ಐಟಿ ದಾಳಿಯ ವಿವರಗಳು, ಐಟಿ ವಿಚಾರಣೆಗೆ ಹಾಜರಾಗಿದ್ದ ಬಗೆಯೂ ಡಿಕೆಶಿ ಮುಖ್ಯಮಂತ್ರಿಯವರಿಗೆ ವಿವರಣೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿಎಂ ವಿರುದ್ಧ ಡಿಕೆಶಿ ತಾಯಿ ಮಾಡಿದ ಆರೋಪಕ್ಕೆ ಸಮಜಾಯಿಷಿ ನೀಡಿ ತಾಯಿಯ ಪ್ರಮಾದಕ್ಕೆ ವೈಯಕ್ತಿಕವಾಗಿ ಸಿಎಂ ಬಳಿ ಕ್ಷಮೆಯಾಚಿಸಿದ್ದಾರೆ. ಗೌರಮ್ಮನವರ ಹೇಳಿಕೆ ಉದ್ದೇಶಪೂರ್ವಕವಲ್ಲ ಎಂದು ಅರಿವಾಗಿದೆ ಎಂದು ಸಿಎಂ ಕೂಡ ಡಿಕೆಶಿಗೆ ಹೇಳಿದ್ದಾರೆ. ಐಟಿ ದಾಳಿಯ ಪರಿಣಾಮಗಳ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಸಿದ್ದು, ಸುವರ್ಣನ್ಯೂಸ್'ಗೆ ಉನ್ನತ ಮೂಲಗಳ ಮಾಹಿತಿ ದೊರಕಿದೆ.
(ಸಂಗ್ರಹ ಚಿತ್ರ)
