ವೈದ್ಯರು ಬಂದು ಅಣ್ಣನ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಣ್ಣನ ಆರೋಗ್ಯದಲ್ಲಿ ಏರುಪೇರು ಆಗಿದ್ದಕ್ಕೆ ಆತಂಕ ತಂದಿತ್ತು. ಅಣ್ಣನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ
ಬೆಂಗಳೂರು(ಆ.04): ಸಿಎಂ ಸಿದ್ದರಾಮಯ್ಯ ಬಗ್ಗೆ ನಮ್ಮ ತಾಯಿ ಬೇರೆ ರೀತಿ ಹೇಳಿದ್ದಾರೆ. ‘ದಾಳಿ ನೆಪದಲ್ಲಿ ಐಟಿ ಅಧಿಕಾರಿಗಳು ನಮ್ಮ ತಾಯಿಗೆ ಕಿರಿಕರಿ ಮಾಡಿದ್ದಾರೆ. ನಮ್ಮ ತಾಯಿ ಗೊಂದಲದಿಂದ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ. ‘ನಮ್ಮ ತಾಯಿ ಮೋದಿ ಅಂತ ಹೇಳೋದಕ್ಕೆ ಹೋಗಿ ಸಿದ್ದರಾಮಯ್ಯ ಅಂದಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಿಕರಣ ನೀಡಿದ್ದಾರೆ.
ಡಿಕೆಶಿ ನಿವಾಸದಿಂದ ಸಚಿವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು ಬಂದು ಅಣ್ಣನ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಣ್ಣನ ಆರೋಗ್ಯದಲ್ಲಿ ಏರುಪೇರು ಆಗಿದ್ದಕ್ಕೆ ಆತಂಕ ತಂದಿತ್ತು. ಅಣ್ಣನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಕೇಂದ್ರದ ಒತ್ತಡದಿಂದ ಐಟಿಯವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಇಂದೇ ತನಿಖೆ ಮುಗಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
