“ಕಳೆದ 3 ದಿನಗಳಿಂದ ತಾವೆಲ್ಲಾ ನನ್ನ ಮನೆ, ನನ್ನ ಸ್ನೇಹಿತರ ಮನೆ, ಸಂಬಂಧಿಕರ ಮನೆ… ಇಲ್ಲೆಲ್ಲಾ ಹಗಲೂ ರಾತ್ರಿ ಕಾಯ್ದಿದ್ದೀರಿ… ಡೆಮಾಕ್ರಸಿಯಲ್ಲಿ ನೀವೂ ಒಂದು ಭಾಗ. ನಿಮ್ಮದೇ ವಿಚಾರಗಳನ್ನು ಬಿತ್ತರಿಸಿದ್ದೀರಿ. ನೀವು ನನ್ನ ಬಗ್ಗೆ ಒಳ್ಳೆಯದು ಹೇಳಿರಬಹುದು, ಕೆಟ್ಟದ್ದರೂ ಹೇಳಿರಬಹುದು, ಏನು ಹೇಳಿದಿರಿ ಎಂದು ಕೇಳುವುದಿಲ್ಲ…. ಎಲ್ಲದಕ್ಕೂ ಉತ್ತರ ಕೊಡುತ್ತೇನೆ…

ಬೆಂಗಳೂರು(ಆ. 05): ಐಟಿ ರೇಡ್’ಗೆ ತುತ್ತಾಗಿರುವ ಇಂಧನ ಸಚಿವ ಡಿಕೆ ಶಿವಕುಮಾರ್ 3 ದಿನಗಳ ನಂತರ ತಮ್ಮ ಮನೆಯಿಂದ ಹೊರಬಂದಿದ್ದಾರೆ. ಒಂದಿಷ್ಟೂ ವಿಚಲಿತಗೊಂಡವರಂತೆ ಕಂಡುಬರದ ಡಿಕೆಶಿ, ಸತ್ಯಕ್ಕೇ ಗೆಲುವಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೂರು ದಿನಗಳ ಕಾಲ ತಮ್ಮನ್ನು ಕಾದ, ರಕ್ಷಣೆ ಕೊಟ್ಟ ಪೊಲೀಸರಿಗೆ ಡಿಕೆಶಿ ಧನ್ಯವಾದ ಹೇಳಿದ್ದಾರೆ. ಮನೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಕೆಲ ಹೊತ್ತು ಮಾತನಾಡಿದ ಡಿಕೆಶಿ ಬಳಿಕ ತಾವು ತಾವು ನಂಬಿರುವ ದೇವರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಅಲ್ಲಿಂದ ಹೊರಟರು.

ಮಾಧ್ಯಮಗಳಿಗೆ ಹೇಳಿದ್ದೇನು?
“ಕಳೆದ 3 ದಿನಗಳಿಂದ ತಾವೆಲ್ಲಾ ನನ್ನ ಮನೆ, ನನ್ನ ಸ್ನೇಹಿತರ ಮನೆ, ಸಂಬಂಧಿಕರ ಮನೆ… ಇಲ್ಲೆಲ್ಲಾ ಹಗಲೂ ರಾತ್ರಿ ಕಾಯ್ದಿದ್ದೀರಿ… ಡೆಮಾಕ್ರಸಿಯಲ್ಲಿ ನೀವೂ ಒಂದು ಭಾಗ. ನಿಮ್ಮದೇ ವಿಚಾರಗಳನ್ನು ಬಿತ್ತರಿಸಿದ್ದೀರಿ. ನೀವು ನನ್ನ ಬಗ್ಗೆ ಒಳ್ಳೆಯದು ಹೇಳಿರಬಹುದು, ಕೆಟ್ಟದ್ದರೂ ಹೇಳಿರಬಹುದು, ಏನು ಹೇಳಿದಿರಿ ಎಂದು ಕೇಳುವುದಿಲ್ಲ…. ಎಲ್ಲದಕ್ಕೂ ಉತ್ತರ ಕೊಡುತ್ತೇನೆ…

“ನಾನು ಯಾವತ್ತೂ ಕಾನೂನು ಮತ್ತು ಸಂವಿಧಾನದ ಚೌಕಟ್ಟು ಮೀರಿ ನಡೆದವನಲ್ಲ. ರೇಡ್’ನಲ್ಲಿ ಏನು ನಡೆಯಿತು ಎಂಬ ಚಿತ್ರಣವನ್ನು ನಾನೀಗ ನೀಡುವುದಿಲ್ಲ. ಎಲ್ಲವನ್ನೂ ಡಾಕ್ಯುಮೆಂಟ್ಸ್ ಹೇಳುತ್ತವೆ. ಪಂಚನಾಮೆ ಮಾಡಿದ್ದನ್ನು ನೀವು ತರಿಸಿ ಬೇಕಾದರೆ ನೋಡಬಹುದು. ಎಲ್ಲದಕ್ಕೂ, ಎಲ್ಲರಿಗೂ ನಾನು ಖಂಡಿತ ಉತ್ತರ ನೀಡುತ್ತೇನೆ,” ಎಂದು ಡಿಕೆಶಿ ಹೇಳಿದರು.

“ನನ್ನ ಕಷ್ಟದ ಕಾಲದಲ್ಲಿ ಯಾರೆಲ್ಲಾ ಇದ್ದಿರಿ, ನನಗೆ ಯಾರೆಲ್ಲಾ ಪ್ರೋತ್ಸಾಹ, ಬೆಂಬಲ ಕೊಟ್ಟಿದ್ದೀರಿ ಅವರಿಗೆಲ್ಲಾ ನನ್ನ ಧನ್ಯವಾದಗಳು ಎಂದು ಹೇಳಿದ ಡಿಕೆ ಶಿವಕುಮಾರ್, ಕೊನೆಗೆ ಸತ್ಯಕ್ಕೇ ಗೆಲುವಾಗುತ್ತದೆ,” ಎಂದು ಸಂದೇಶ ಕೊಟ್ಟು ತಾವು ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಹೊರಟರು.