ಬೆಂಗಳೂರು :  ತೆಲಂಗಾಣದಲ್ಲಿ ಇದೇ ಡಿಸೆಂಬರ್ 11 ರಂದು ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ಮುಖಂಡ ಅಧ್ಯಕ್ಷ ರೇವಂತ್ ರೆಡ್ಡಿ ಬಂಧನವನ್ನು ತೆಲಂಗಾಣ ಮನವೊಲಿಕೆ ಸಮಿತಿ ಸದಸ್ಯರಾಗಿರುವ ಕರ್ನಾಟಕ ಸಚಿವ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಳಗಿನ ಜಾವ 4 ಗಂಟೆಗೆ ತೆಲಂಗಾಣದಲ್ಲಿ  ನಮ್ಮ ಪಕ್ಷದ ರೇವಂತ್ ರೆಡ್ಡಿಯವರನ್ನ ಅರೆಸ್ಟ್ ಮಾಡಲಾಗಿದೆ.  ರೇವಂತ್ ಬಂಧನದ ಬಗ್ಗೆ ಅವರ ಪತ್ನಿ ಗೀತಾರಿಂದ ತಿಳಿಯಿತು.  500ಕ್ಕೂ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಮನೆಗೆ ನುಗ್ಗಿ ಬಂಧಿಸಿದ್ದು, ಈ ಕ್ರಮವನ್ನು ತಾವು ಖಂಡಿಸುವುದಾಗಿ ಹೇಳಿದ್ದಾರೆ. 

ಮನೆಯ ಗೇಟ್ ಮುರಿದು ಏಕಾಏಕಿ ನುಗ್ಗಿ ಬಂಧಿಸಿ, ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ.  ಈ ರೀತಿ ನಡೆದುಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಈ ಕೃತ್ಯದ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಕೈವಾಡ ಇದೆ. ಈ ರೀತಿ ನಡೆದುಕೊಂಡು ಅವರೇ ಸೋಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ಮಂಗಳವಾರ ಕೊಡಂಗಲ್ ಕ್ಷೇತ್ರದಲ್ಲಿ ಚಂದ್ರಶೇಖರ್ ರಾವ್ ಅವರ ಚುನಾವಣಾ ರ್ಯಾಲಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಬಂಧಿಸಲಾಗಿದೆ. ಈ ಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ತಾವು ದೂರು ನೀಡುವುದಾಗಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ರೇವಂತ್ ರೆಡ್ಡಿ ಕ್ಷೇತ್ರವಾದ ಕೊಡಂಗಲ್ ನಲ್ಲಿ ಮಂಗಳವಾರ ಚಂದ್ರಶೇಖರ್ ರಾವ್ ರ್ಯಾಲಿ ಹಮ್ಮಿಕೊಂಡಿದ್ದು ಈ ವೇಳೆ ತಮ್ಮ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ ರೇವಂತ್ ರೆಡ್ಡಿಯನ್ನು ಬೆಳ್ಳಂಬೆಳಗ್ಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಕಾಂಗ್ರೆಸ್ ಮುಖಂಡ ಅರೆಸ್ಟ್