ನವದೆಹಲಿ[ಸೆ.16]: ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ಶನಿವಾರ ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಸೇರಿದ್ದ ಇ.ಡಿ. ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ಹೃದ್ರೋಗ ಘಟಕಕ್ಕೆ ದಾಖಲಾಗಿದ್ದಾರೆ.

ಹೃದಯದ ಯಾವ ಸಮಸ್ಯೆಗೆ ಅವರು ತುತ್ತಾಗಿದ್ದಾರೆ ಎಂಬ ಮಾಹಿತಿ ಹೊರಬಂದಿಲ್ಲ. ಆದರೆ ಸದ್ಯಅವರ ರಕ್ತದೊತ್ತಡ ನಿಯಂತ್ರಣದಲ್ಲಿದ್ದು ಕೆಮ್ಮು, ಶೀತ, ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಡಿ.ಕೆ.ಶಿವಕುಮಾರ್‌ ಅವರನ್ನು ಅವರ ಕುಟುಂಬದ ವೈದ್ಯ ರಂಗನಾಥ್‌ ಮಾತ್ರ ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ.

ಡಿಕೆಶಿಗೆ ಆರೋಗ್ಯದಲ್ಲಿ ಏರುಪೇರು: ದೆಹಲಿ ಆಸ್ಪತ್ರೆಗೆ ದಾಖಲು!

ಇನ್ನು ಪುತ್ರಿ ಐಶ್ವರ್ಯ ಅಸ್ಪತ್ರೆಗೇ ಬಂದು ನೋಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್‌ ಅವರ ಕಸ್ಟಡಿ ಅವಧಿ ಸೆ.17ಕ್ಕೆ ಮುಕ್ತಾಯಗೊಳ್ಳಲಿದೆ.