ತಾನು 24ನೇ ವಯಸ್ಸಿಗೇ ದೇವೇಗೌಡರಂಥವರ ವಿರುದ್ಧ ಚುನಾವಣೆಯಲ್ಲಿ ನಿಂತಿದ್ದವನು. ತನ್ನನ್ನು ಹೆದರಿಸಲು, ಬೆದರಿಸಲು ಬರಬೇಡಿ ಎಂದು ಅಧಿಕಾರಿಗಳಿಗೆ ಡಿಕೆಶಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದು ನನ್ನ ಮೇಲೆ ನಡೆದ ಮೊದಲ ದಾಳಿಯಲ್ಲ. ಈ ಮುಂಚೆಯೂ ಇಂಥ ದಾಳಿಗಳನ್ನು ನೋಡಿದ್ದೇನೆ. ನನ್ನ ಬಳಿ ಹೆಚ್ಚಿನ ಆಸ್ತಿ ಸಿಕ್ಕಿದ್ದರೆ ಅದರ ಬಗ್ಗೆ ಮಾತನಾಡಿರಿ ಹೊರತು ಬೆದರಿಕೆ ಹಾಕಲು ಬರಬೇಡಿ ಎಂದು ಹೇಳಿದ ಡಿಕೆ ಶಿವಕುಮಾರ್ ಮಾತಿಗೆ ಐಟಿ ಅಧಿಕಾರಿಗಳು ನಿರುತ್ತರರಾದರೆನ್ನಲಾಗಿದೆ.
ಬೆಂಗಳೂರು(ಆ. 05): ಮೂರ್ನಾಲ್ಕು ದಿನಗಳಿಂದ ಡಿಕೆ ಶಿವಕುಮಾರ್ ಅವರನ್ನು ಮನೆ ಬಿಟ್ಟು ಕದಲದಂತೆ ಹಿಡಿದಿಟ್ಟುಕೊಂಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸರಿಯಾದ ಪಾಠ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಡಿಕೆಶಿಯವರನ್ನು ಹೆದರಿಸಲು, ಬೆದರಿಸಲು ಪ್ರಯತ್ನಿಸುತ್ತಿದ್ದರೆನ್ನಲಾದ ಐಟಿ ಅಧಿಕಾರಿಗಳಿಗೆ ಡಿಕೆಶಿ ತಮ್ಮ ಪವರ್ ತೋರಿಸಿಕೊಟ್ಟರೆನ್ನಲಾಗಿದೆ. ಮುಲಾಜಿಲ್ಲದೇ ಕಾರ್ಯಾಚರಣೆ ಮಾಡಿದ ಐಟಿ ಅಧಿಕಾರಿಗಳಿಗೆ ಡಿಕೆಶಿ ಕೂಡ ಮುಲಾಜಿಲ್ಲದೇ ನಿಷ್ಠುರವಾಗಿ ಮಾತನಾಡಲು ಹಿಂಜರಿಯಲಿಲ್ಲ.
ತಾನು 24ನೇ ವಯಸ್ಸಿಗೇ ದೇವೇಗೌಡರಂಥವರ ವಿರುದ್ಧ ಚುನಾವಣೆಯಲ್ಲಿ ನಿಂತಿದ್ದವನು. ತನ್ನನ್ನು ಹೆದರಿಸಲು, ಬೆದರಿಸಲು ಬರಬೇಡಿ ಎಂದು ಅಧಿಕಾರಿಗಳಿಗೆ ಡಿಕೆಶಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದು ನನ್ನ ಮೇಲೆ ನಡೆದ ಮೊದಲ ದಾಳಿಯಲ್ಲ. ಈ ಮುಂಚೆಯೂ ಇಂಥ ದಾಳಿಗಳನ್ನು ನೋಡಿದ್ದೇನೆ. ನನ್ನ ಬಳಿ ಹೆಚ್ಚಿನ ಆಸ್ತಿ ಸಿಕ್ಕಿದ್ದರೆ ಅದರ ಬಗ್ಗೆ ಮಾತನಾಡಿರಿ ಹೊರತು ಬೆದರಿಕೆ ಹಾಕಲು ಬರಬೇಡಿ ಎಂದು ಹೇಳಿದ ಡಿಕೆ ಶಿವಕುಮಾರ್ ಮಾತಿಗೆ ಐಟಿ ಅಧಿಕಾರಿಗಳು ನಿರುತ್ತರರಾದರೆನ್ನಲಾಗಿದೆ.
ಮೂರು ದಿನಗಳ ಬಳಿಕ ಇಂದು ತಮ್ಮ ಮನೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ತಾನೇನು ಕಿವಿಗೆ ಹೂವ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿಲ್ಲ ಎಂದು ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.