ಬಿಜೆಪಿ ನಾಯಕರಾದ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎನ್ನಲಾದ ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದ ಅ.30ರ ಸದನ ಸಮಿತಿ ಸಭೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಮನವೊಲಿಸುವಲ್ಲಿ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಬೆಂಗಳೂರು(ಅ.28): ಬಿಜೆಪಿ ನಾಯಕರಾದ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎನ್ನಲಾದ ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದ ಅ.30ರ ಸದನ ಸಮಿತಿ ಸಭೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಮನವೊಲಿಸುವಲ್ಲಿ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎ್‌ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಜಾರ್ಜ್ ರಾಜೀನಾಮೆಗೆ ದೊಡ್ಡ ಧ್ವನಿ ಎತ್ತಿದ್ದರೆ, ಜೆಡಿಎಸ್‌ನ ಕುಮಾರ ಸ್ವಾಮಿ ರಾಜೀನಾಮೆ ಅಗತ್ಯವಿಲ್ಲ ಎಂದು ಜಾರ್ಜ್ ಪರ ಬ್ಯಾಟ್ ಬೀಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಇಂ‘ನ ಸಚಿವ ಶಿವಕುಮಾರ್ ಕುಮಾರಸ್ವಾಮಿ ಭೇಟಿ ಮಾಡಿ ಬಿಜೆಪಿ ನಾಯಕರಿಗೆ ಸಂಕಷ್ಟ ತರಲಿದೆ ಎನ್ನಲಾಗುವ ಮಹತ್ವದ ಸದನ ಸಮಿತಿಯ ವರದಿಗೆ ಸಹಿ ಹಾಕಲು ಸಭೆಗೆ ಬರುವಂತೆ ಮನವೊಲಿಸಿರುವುದು ರಾಜಕೀಯ ವಲಯ ದಲ್ಲಿ ಕುತೂಹಲ ಮೂಡಿಸಿದೆ.

ಶುಕ್ರವಾರ ಸಂಜೆ ಜೆಪಿ ನಗರದ ಕುಮಾರಸ್ವಾಮಿ ಅವರ ಮನೆಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ತೆರಳಿದ ಶಿವಕುಮಾರ್ ಸದನ ಸಮಿತಿಯು ಸಿದ್ಧಪಡಿಸಿರುವ ವರದಿಯ ಮುಖ್ಯಾಂಶಗಳ ವಿವರ ನೀಡಿದರು. ಅಲ್ಲದೆ, ಈ ವರದಿಗೆ ಕುಮಾರಸ್ವಾಮಿ ಈ ಹಿಂದೆ ನೀಡಿದ್ದ ಮಾಹಿತಿಯನ್ನು ಹೇಗೆ ಬಳಸಲಾಗಿದೆ ಎಂದು ವಿವರಿಸಿ ಸಭೆಗೆ ಆಗಮಿಸುವಂತೆ ಕೋರಿದರು ಎನ್ನಲಾಗಿದೆ. ಡಿಕೆಶಿ ಆಹ್ವಾನಕ್ಕೆ ಕುಮಾರಸ್ವಾಮಿ ಒಪ್ಪಿದ್ದಾರೆನ್ನಲಾಗಿದೆ.

ಮುನಿದಿದ್ದ ಕುಮಾರಸ್ವಾಮಿ:

ರಾಜ್ಯ ಸರ್ಕಾರವು ವಿದ್ಯುತ್ ಖರೀದಿ ಹಗರಣಗಳ ಬಗ್ಗೆ ವರದಿ ಸಲ್ಲಿಸಲು ನೇಮಿಸಿದ ಸದನ ಸಮಿತಿಗೆ ಇಂ‘ನ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದು ಹಾಗೂ ಸಮಿತಿಯು ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ಬಗ್ಗೆ ಆರಂಭದ ದಿನಗಳಲ್ಲಿ ಮುಗುಂ ಆಗಿ ಇದ್ದುದರ ಬಗ್ಗೆ ಕುಮಾರಸ್ವಾಮಿ ಅಸಮಾಧಾನಗೊಂಡಿದ್ದರು. ಹೀಗಾಗಿ ಸದನ ಸಮಿತಿಯ ಹಲವಾರು ಸಭೆಗಳಿಗೆ ಹಾಜರಾಗಿರಲಿಲ್ಲ. ಈ ಹಿಂದೆ ಸದನ ಸಮಿತಿ ಸದಸ್ಯತ್ವಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೂ ಸರ್ಕಾರ ರಾಜೀನಾಮೆ ಅಂಗೀಕರಿಸಿರಲಿಲ್ಲ. ಇತ್ತೀಚೆಗೆ ಕುಮಾರಸ್ವಾಮಿ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದಾರೆ ಎನ್ನಲಾದ ಹಲವು ಅಕ್ರಮಗಳ ಕುರಿತಂತೆ ಮಹತ್ವದ ದಾಖಲೆಗಳನ್ನು ಸದನ ಸಮಿತಿಗೆ ಸಲ್ಲಿಸಿದ್ದರು. ಈ ಮಧ್ಯೆ ಯಡಿಯೂರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಕಲ್ಲಿದ್ದಲು ಹಗರಣದ ಆರೋಪ ಮಾಡಿರುವುದರಿಂದ ಕುಮಾರಸ್ವಾಮಿ ಅವರು ಸಲ್ಲಿಸಿರುವ ದಾಖಲೆಗಳಿಗೆ ಮಹತ್ವ ಬಂದಿದೆ.

ಆರೋಪ ಏನು?:

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಿಂದೆ ಇಂಧನ ಸಚಿವೆ ಆಗಿದ್ದಾಗಿನ ಹಗರಣವಿದು. ಆಗ ಜಿಂದಾಲ್ ಕಂಪನಿ ಪ್ರತಿ ಯುನಿಟ್‌'ಗೆ 3.50 ರು.ನಂತೆ ವಿದ್ಯುತ್ ಪೂರೈಸಲು ಸಿದ್ಧವಿತ್ತು. ಆದರೆ, ಸರ್ಕಾರ ಇದರ ಬದಲು ಯುನಿಟ್‌'ಗೆ 6.20 ರು.ನಂತೆ ವಿದ್ಯುತ್ ಖರೀದಿ ಸಿತು. ಇದರಿಂದ ರಾಜ್ಯದ ಬೊಕ್ಕಸಕ್ಕೆ 28 ಸಾವಿರ ಕೋಟಿ ರು. ನಷ್ಟವಾಗಿದೆ ಎಂಬ ಆರೋಪವಿದೆ.