ನವದೆಹಲಿ [ಆ.22]: KPCC ಚುಕ್ಕಾಣಿ ಡಿ.ಕೆ.ಶಿವಕುಮಾರ್ ವಹಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ನಡುವೆ, ತಾವು ಯಾವುದೇ ರಾಜಕೀಯ ಚರ್ಚೆಗಾಗಿ ದಿಲ್ಲಿಗೆ ಬಂದಿಲ್ಲ. ರಾಜೀವ್ ಗಾಂಧಿ ಜನ್ಮ ದಿನದಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದಾಗಿ ಡಿ.ಕೆ.ಶಿವಕುಮಾರ್ ಹೇಳಿದರು.  ದಿಲ್ಲಿಯಲ್ಲಿ ತಾವು ಹೈಕಮಾಂಡ್ ನಾಯಕರನ್ನು ಯಾರನ್ನೂ ಭೇಟಿ ಮಾಡಿಲ್ಲ ಎಂದರು.   

"

ಇನ್ನು ಅನರ್ಹ ಶಾಸಕರ ಬಗ್ಗೆಯೂ ಈ ವೇಳೆ ಅಸಮಾಧಾನ ಹೊರಹಾಕಿದ್ದು, ಯಾರವರು ಎಂದು ಮರು ಪ್ರಶ್ನೆ ಮಾಡಿದರು.  40 ಕಟ್ಟಿದ ಪಕ್ಷ ಬಿಟ್ಟು ಹೋಗಿ ಯಡಿಯೂರಪ್ಪ ಅವರನ್ನು ಕುರ್ಚಿಯಲ್ಲಿ ಕೂರಿಸಿದ್ದಾರೆ. ಸಂತೋಷ ಎಂದು ವ್ಯಂಗ್ಯದ ದಾಟಿಯಲ್ಲಿ ಉತ್ತರಿಸಿದರು.  

ಅಲ್ಲದೇ ಅನರ್ಹರು ಇಲ್ಲಿ ಬಂದರೆ ಕಾಫಿಯನ್ನು ಕುಡಿಯುತ್ತೇನೆ. ಊಟವನ್ನು ಮಾಡುತ್ತೇನೆ. ರಾಜಕೀಯಕ್ಕೂ, ಫ್ರೆಂಡ್ ಶಿಪ್ ಗೂ ವ್ಯತ್ಯಾಸವಿದೆ. ಅವರು ಸಂತೋಷವಾಗಿರಲಿ ಎಂದರು. 

ಹೊಸ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?

ಇನ್ನು ತನಗೆ ಕೆಪಿಸಿಸಿ ರಾಜ್ಯಾಧ್ಯಕ್ಷ  ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ ಈ ಬಗ್ಗೆ ಯಾರೂ ನನ್ನನ್ನು ಕರೆದಿಲ್ಲ. ನನ್ನನ್ನು ರಾಜ್ಯಾಧ್ಯಕ್ಷ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಈ ವಿಷಯ ಚರ್ಚೆಗೆ ಬಂದಿಲ್ಲ. ರಾಜ್ಯಾಧ್ಯಕ್ಷ ಸ್ಥಾನ  ಎನ್ನುವುದನ್ನು ಅಂಗಡಿಯಲ್ಲಿ ತಗೆದುಕೊಳ್ಳಲು ಆಗಲ್ಲ. ಅದನ್ನ ಹುಡಿಕೊಂಡು ಹೋಗಲು ಆಗುತ್ತಾ ಎಂದು ಪ್ರಶ್ನೆ ಮಾಡಿದರು. 

ಬಿಜೆಪಿ ಶಾಸಕ ಉಮೇಶ್ ಕತ್ತಿ, ಕಾಂಗ್ರೆಸ್ ನಾಯಕ  ಸಿದ್ದರಾಮಯ್ಯ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ಇದೆಲ್ಲಾ ಸುಳ್ಳು ವಿಚಾರ. ಗೆಳೆತನದಲ್ಲಿ ಭೇಟಿ ಮಾಡಿರಬಹುದು ಎಂದರು.