ಹುಬ್ಬಳ್ಳಿ: ಈ ಚುನಾವಣೆಯಲ್ಲಿ ಕಾಂಗ್ರೆಸ್ ವಾಮಮಾರ್ಗ ಬಳಸುತ್ತಿದ್ದು ಸಚಿವ ಡಿ.  ಕೆ.ಶಿವಕುಮಾರ್ ನಮ್ಮ ಕಾರ್ಯಕರ್ತರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದರು. 

ಪಕ್ಷದ ಮೂರನೇ ಹಂತದ ಮುಖಂಡರನ್ನು ಸಂಪರ್ಕಿಸಿ ಹಣದ ಆಮಿಷ ತೋರಿಸುತ್ತಿದ್ದಾರೆ ಎಂದರು. ಗುಂಡ್ಲುಪೇಟೆ ಚುನಾವಣೆ ವೇಳೆ ವಾಹನದ ಟೈರ್‌ಗಳಲ್ಲಿ ಹಣ ತಂದು ಹಂಚಿದ್ದನ್ನು ಸ್ಮರಿಸಬಹುದು. 

ಆಗ ಆಡಳಿತದ ರಕ್ಷಣೆ ಪಡೆದು ಹಣ ಹಂಚಿದ್ದು ಇದೀಗ ಅದೇ ರೀತಿಯ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ ಎಂದು ದೂರಿದರು.