ಕೇಂದ್ರಕ್ಕೆ 55 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ನೀಡಬೇಕೆಂದು ಮನವಿ ಮಾಡಿಕೊಂಡಿದ್ದೆವು. ಆದರೆ 44 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದ್ದಾರೆ. ಇನ್ನೂ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ನಮಗೆ ಹಂಚಿಕೆಯಾಗಬೇಕು ಎಂದು ವಿವರಿಸಿದರು.

ಬೆಂಗಳೂರು(ಜ.05): ಕಲ್ಲಿದ್ದಲು ಪೂರೈಕೆ ಚರ್ಚೆ ವಿಚಾರವಾಗಿ ಕರ್ನಾಟಕ ಇಂಧನ ಮಂತ್ರಿ ತಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂಬ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ಹೇಳಿಕೆ ಸುಳ್ಳು ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ನಮಗೆ ರಾಜಕಾರಣ ಮಾಡಲು ಬರುವುದಿಲ್ಲ. ನಾವು ಪ್ರತಿ ಹಂತದಲ್ಲೂ ಸಮನ್ವಯತೆ ಕಾಯ್ದುಕೊಂಡಿದ್ದೇವೆ. ಕಲ್ಲಿದ್ದಲು ಪೂರೈಕೆ ರದ್ದಾದ ಬಳಿಕ ನಮ್ಮ ಸಂಸತ್ ಸದಸ್ಯರನ್ನು ಕರೆದು ಚರ್ಚಿಸಲಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಗೋಯೆಲ್ ಅವರಿಗೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.

ಮಹರಾಷ್ಟ್ರದ ಒತ್ತಡದಿಂದಾಗಿ ಕಲ್ಲಿದ್ದಲು ಘಟಕ ಒಪ್ಪಂದ ರದ್ದು ಮಾಡೋ ನೋಟೀಸ್ ಕೇಂದ್ರದಿಂದ ಬಂದಿದೆ. ಕಲ್ಲಿದ್ದಲು ಪೂರೈಕೆ ವಿಚಾರವಾಗಿ ಕೇಂದ್ರದ ಜೊತೆ ಹಲವು ಬಾರಿ ಚರ್ಚಿಸಿದ್ದೇನೆ ಎಂದಿದ್ದಾರೆ. ನಮ್ಮ ಇಲಾಖೆ ವತಿಯಿಂದ ಇದುವರೆಗೂ 55 ಮನವಿಯನ್ನು ಸಲ್ಲಿಸಲಾಗಿದೆ. ಕೇಂದ್ರಕ್ಕೆ 55 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ನೀಡಬೇಕೆಂದು ಮನವಿ ಮಾಡಿಕೊಂಡಿದ್ದೆವು. ಆದರೆ 44 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದ್ದಾರೆ. ಇನ್ನೂ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ನಮಗೆ ಹಂಚಿಕೆಯಾಗಬೇಕು ಎಂದು ವಿವರಿಸಿದರು.