ನೊಣವಿನಕೆರೆ ಅಜ್ಜಯ್ಯನ ಮೇಲೆ ಡಿಕೆಶಿಗೆ ಅಪಾರ ನಂಬಿಕೆ ಇದೆ. ಡಿಕೆಶಿಯವರು ನೊಣವಿನಕೆರೆ ಅಜ್ಜಯ್ಯನ ಹೆಸರಲ್ಲಿ ತಮ್ಮ ಹಣೆಗೆ ತಿಲಕವನ್ನೂ ಇಟ್ಟುಕೊಳ್ಳುತ್ತಾರೆ. ಕಾಡಸಿದ್ದೇಶ್ವರ ಸ್ವಾಮಿಯ ಆತ್ಮವು ಅಜ್ಜಯ್ಯನಲ್ಲಿ ಐಕ್ಯವಾಗಿದೆ ಎಂಬ ನಂಬಿಕೆ ಇದೆ. ದ್ವಾರಕಾನಾಥ್ ಗುರೂಜಿಯವರ ಸಲಹೆಯಂತೆ ಅಜ್ಜಯ್ಯರನ್ನು ಡಿಕೆಶಿ ಪೂಜಿಸಿಕೊಂಡು ಬರುತ್ತಿದ್ದಾರೆ.

ಬೆಂಗಳೂರು(ಆ. 05): ಸತತ ನಾಲ್ಕು ದಿನಗಳ ಗೃಹಬಂಧನದಿಂದ ಹೊರಬಂದ ಡಿಕೆಶಿ ಮೊದಲು ತಮ್ಮ ಇಷ್ಟದೇವರ ದರ್ಶನ ಮಾಡಿದ್ದಾರೆ. ಡಿಕೆಶಿ ತಾನು ಬಹಳ ನಂಬಿರುವ ನೊಣವಿನಕೆರೆ ಅಜ್ಜಯ್ಯನವರ ದರ್ಶನ ಪಡೆದುಕೊಂಡಿದ್ದಾರೆ. ನಾಗರಭಾವಿಯ ಮಾರೇನಹಳ್ಳಿಯಲ್ಲಿರುವ ಅಜ್ಜಯ್ಯನವರನ್ನು ಭೇಟಿ ಮಾಡಿದ ಬಳಿಕ ಡಿಕೆಶಿ ನಿರಾಳರಾಗಿದ್ದಾರೆ. ಏನೂ ಆಗೊಲ್ಲ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಅಜ್ಜಯ್ಯನವರು ಡಿಕೆಶಿ ಅಭಯ ನೀಡಿದರೆನ್ನಲಾಗಿದೆ. ಅವರ ಭೇಟಿ ನಂತರ ಡಿಕೆಶಿ ಹಸನ್ಮುಖರಾಗಿ ಹೊರಬಂದಿದ್ದಾರೆ.

ನೊಣವಿನಕೆರೆ ಅಜ್ಜಯ್ಯನ ಮೇಲೆ ಡಿಕೆಶಿಗೆ ಅಪಾರ ನಂಬಿಕೆ ಇದೆ. ಡಿಕೆಶಿಯವರು ನೊಣವಿನಕೆರೆ ಅಜ್ಜಯ್ಯನ ಹೆಸರಲ್ಲಿ ತಮ್ಮ ಹಣೆಗೆ ತಿಲಕವನ್ನೂ ಇಟ್ಟುಕೊಳ್ಳುತ್ತಾರೆ. ಕಾಡಸಿದ್ದೇಶ್ವರ ಸ್ವಾಮಿಯ ಆತ್ಮವು ಅಜ್ಜಯ್ಯನಲ್ಲಿ ಐಕ್ಯವಾಗಿದೆ ಎಂಬ ನಂಬಿಕೆ ಇದೆ. ದ್ವಾರಕಾನಾಥ್ ಗುರೂಜಿಯವರ ಸಲಹೆಯಂತೆ ಅಜ್ಜಯ್ಯರನ್ನು ಡಿಕೆಶಿ ಪೂಜಿಸಿಕೊಂಡು ಬರುತ್ತಿದ್ದಾರೆ.

ಇದೇ ವೇಳೆ, ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮನವರು ತಮ್ಮ ಮನೆ ದೇವರು ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕನಕಪುರ-ಸಾತನೂರು ರಸ್ತೆಯಲ್ಲಿ ಕಬ್ಬಾಳಮ್ಮ ದೇವಸ್ಥಾನವಿದೆ.

ನೊಣವಿನಕೆರೆಯ ಕಾಡಸಿದ್ದೇಶ್ವರ ಸ್ವಾಮಿ ಮಠದಲ್ಲಿ ಡಿಕೆಶಿ ಹೋಮ ಹವನ ಮಾಡುತ್ತಿರುವ ವಿಡಿಯೋ

(ಡಿಕೆಶಿ ಕಾಡಸಿದ್ದೇಶ್ವರ ಮಠದಲ್ಲಿ ಹವನ ಮಾಡುತ್ತಿರುವ ಫೈಲ್ ಫೋಟೋ)