Asianet Suvarna News Asianet Suvarna News

ಹಿಂದೂಗಳ ಕೈಬಿಟ್ಟ ಡೊನಾಲ್ಡ್ ಟ್ರಂಪ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಕೆಲ ವಿಚಾರಗಳಲ್ಲಿ ಪೇಚಿಗೆ ಸಿಲುಕುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ದೀಪಾವಳಿ ಶುಭಾಶಯ ಕೋರಿ ಅದರಲ್ಲಿ ಹಿಂದುಗಳನ್ನೇ ಮರೆತುಬಿಟ್ಟಿದ್ದಾರೆ. 

Diwali wishes tweet Donald Trump forgets to mention Hindus
Author
Bengaluru, First Published Nov 15, 2018, 10:07 AM IST

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿ ಸಂಭ್ರಮದ ಶುಭಾಶಯ ಕೋರಿದ್ದಾರೆ. 

ಆದರೆ, ಹಿಂದೂಗಳನ್ನೇ ಮರೆಯುವ ಮೂಲಕ ಇದೀಗ ತಾವೇ ಪೇಚಿಗೆ ಸಿಲುಕಿದ್ದಾರೆ. ಟ್ರಂಪ್‌ ನ. 7 ರಂದು ಶ್ವೇತಭವನದ ಐತಿಹಾಸಿಕ ರೂಸ್‌ವೆಲ್ಟ್‌ ಕೊಠಡಿಯಲ್ಲಿ ಭಾರತೀಯ-ಅಮೆರಿಕನ್ನರು, ಭಾರತೀಯ ಮೂಲದ ಅಧಿಕಾರಿಗಳು ಮತ್ತು ರಾಯಭಾರಿ ಅಧಿಕಾರಿಗಳ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದರು. 

ಜೊತೆಗೆ ಈ ಬಗ್ಗೆ ಟ್ವೀಟ್‌ ಮಾಡಿದ್ದ ಟ್ರಂಪ್‌, ‘ನಾವು ದೀಪಾವಳಿ ಸಂಭ್ರಮಾಚರಣೆಗಾಗಿ ಇಲ್ಲಿ ಸೇರಿದ್ದೇವೆ. ಬೌದ್ಧರು, ಸಿಖ್‌, ಮತ್ತು ಜೈನರು ಸೇರಿ ಎಲ್ಲ ಅಮೆರಿಕನ್ನರು ಹಾಗೂ ವಿಶ್ವಾದ್ಯಂತ ಇಂದು ದೀಪಾವಳಿ ಆಚರಿಸುತ್ತಿದ್ದಾರೆ’ ಎಂದಿದ್ದರು. 

ಆದರೆ, ಈ ಸಂದರ್ಭದಲ್ಲಿ ಹಿಂದೂ ಸಮುದಾಯದ ಹೆಸರನ್ನೇ ಟ್ರಂಪ್‌ ಕೈಬಿಟ್ಟಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ್ದ ಸಿಎನ್‌ಎನ್‌ ಸುದ್ದಿ ವಾಹಿನಿಯ ಪತ್ರಕರ್ತ ಮನು ರಾಜು, ‘ದೀಪಾವಳಿ ಹಿಂದೂಗಳ ಪವಿತ್ರ ಹಬ್ಬ. ಆದರೆ, ಟ್ರಂಪ್‌ ಆ ಸಮುದಾಯವನ್ನೇ ಕಡೆಗಾಣಿಸಿದ್ದಾರೆ’ ಎಂದು ಹೇಳಿದ್ದರು. ಇದಾದ ನಂತರ ಟ್ರಂಪ್‌ ಅವರು ತಮ್ಮ ಮೂಲ ಟ್ವೀಟ್‌ ಅಳಿಸಿ, ಮತ್ತೊಮ್ಮೆ ಟ್ವೀಟ್‌ ಮಾಡಿದ್ದಾರೆ. ಆದಾಗ್ಯೂ, ಅದರಲ್ಲಿಯೂ ಹಿಂದೂ ಸಮುದಾಯದ ಹೆಸರು ಸೇರಿಸುವಲ್ಲಿ ಎಡವಿದ್ದಾರೆ.ಕುಹುಕವಾಡಿದ್ದಾರೆ.

 

Follow Us:
Download App:
  • android
  • ios