ಬೆಳಕಿನ ಹಬ್ಬ ದೀಪಾವಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶದ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.

ನವದೆಹಲಿ (ಅ.29): ಬೆಳಕಿನ ಹಬ್ಬ ದೀಪಾವಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶದ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.

ದೀಪಾವಳಿಯು ದುಷ್ಟ ಶಕ್ತಿಯ ವಿರುದ್ಧ ಸಾಧಿಸಿದ ವಿಜಯದ ಪ್ರತೀಕ. ಅಂಧಕಾರದಿಂದ ಬೆಳಕಿನೆಡೆಗೆ ಒಯ್ಯುವ ದೀಪಾವಳಿ ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಣಬ್ ಮುಖರ್ಜಿ ಹಾರೈಸಿದ್ದಾರೆ.

ಮಾಲಿನ್ಯ ಮುಕ್ತ ದೀಪಾವಳಿಯನ್ನು ಆಚರಿಸಿ. ಪಟಾಕಿಯನ್ನು ಹೊಡೆಯುವಾಗ ಜಾಗ್ರತೆಯಿರಲಿ ಎಂದು ವಿನಂತಿಸಿಕೊಂಡಿದ್ದಾರೆ.