Asianet Suvarna News Asianet Suvarna News

ಎಲೆ ವ್ಯಾಪಾರಿ ಮಗ ಯುಪಿಎಸ್'ಸಿಯಲ್ಲಿ 600ನೇ ರ‍್ಯಾಂಕ್‌

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ 2016ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತಿಪಟೂರಿನ ಟಿ.ಎಸ್‌. ದಿವಾಕರ 600ನೇ ರ್ಯಾಂಕ್​ಗಳಿಸುವ ಮೂಲಕ ಕಲ್ಪತರು ನಗರಕ್ಕೆ ಕೀರ್ತಿ ತಂದಿದ್ದಾರೆ. ಈ ಮೊದಲೆ ಇವರು ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೇವಲ 19 ಅಂಕಗಳಿಂದ ಅನುತ್ತೀರ್ಣರಾಗಿದ್ದರು.

Diwakar TS Secured 600 rank In UPSC

ತುಮಕೂರು(ಜೂ.06): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ 2016ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತಿಪಟೂರಿನ ಟಿ.ಎಸ್‌. ದಿವಾಕರ 600ನೇ ರ್ಯಾಂಕ್​ಗಳಿಸುವ ಮೂಲಕ ಕಲ್ಪತರು ನಗರಕ್ಕೆ ಕೀರ್ತಿ ತಂದಿದ್ದಾರೆ. ಈ ಮೊದಲೆ ಇವರು ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೇವಲ 19 ಅಂಕಗಳಿಂದ ಅನುತ್ತೀರ್ಣರಾಗಿದ್ದರು.

ತಿಪಟೂರಿನ ಎಲೆ ಆಸರದಲ್ಲಿ ಎಲೆ ಅಡಿಕೆ ವ್ಯಾಪಾರಿ ಎಂದೇ ಪ್ರಸಿದ್ಧಿ ಪಡೆದಿರುವ ಎಲೆ ಶಿವಣ್ಣ ಮತ್ತು ಪ್ರೇಮಾ ದಂಪತಿಗಳ ಮಗನಾಗಿರುವ ಟಿ.ಎಸ್‌. ದಿವಾಕರ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ಮತ್ತು ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಪಿ.ಯು.ಸಿ ಹಾಗೂ ಮೈಸೂರಿನ ಎಸ್‌.ಜೆ.ಸಿ.ಇ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಎಲೆ ವ್ಯಾ ಪಾರ ಮಾಡಿ ಅಪ್ಪ, ಅಮ್ಮನಿಗೆ ಸಹಾಯ ಮಾಡುತ್ತಿದ್ದ ಇವರು ಯಾವುದೇ ಕೋಚಿಂಗ್‌ ತೆಗೆದುಕೊಳ್ಳದೆ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಕಲ್ಪತರು ನಗರಕ್ಕೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.

ಟಿ.ಎಸ್‌. ದಿವಾಕರ್ ಕಂಪ್ಯೂಟರ್ ಎಂಜಿನಿಯರಿಂಗ್‌ 2010ರಲ್ಲಿ ಮುಗಿಸಿದರು. ನಂತರ 2014 ರವರೆಗೆ ಹೈದರಾಬಾದ್‌ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ ಆಗಿ ಕಾರ್ಯನಿರ್ವಹಿಸಿದರು. ಈ ಪದವಿಯಿಂದ ಒಂದು ಸೀಮಿತ ವಲಯದಲ್ಲಿ ಮಾತ್ರ ಕೆಲಸ ಮಾಡಬಹುದಾಗಿತ್ತು. ಆದರೆ ಇವರು ಸಮಾಜದ ಮಧ್ಯದಲ್ಲಿ ಇದ್ದು, ಜನರಿಗೆ ಹಾಗೂ ಸಮಾಜದ ಅಭಿವೃದ್ಧಿಗೆ ನಾನಾ ರೀತಿಯ ಸಹಾಯ ಮಾಡಬಹುದೆಂಬ ಆಸೆ ಇಟ್ಟುಕೊಂಡು ಐ.ಎ.ಎಸ್‌ ಮಾಡಬೇಕೆಂಬ ಕನಸಿನಿಂದ ಯು.ಪಿ.ಎಸ್‌.ಸಿ ಪರೀಕ್ಷೆ ಪಾಸು ಮಾಡಿದರು. ಇನ್ನು ಮುಂದೆ ಕಠಿಣ ಪರಿಶ್ರಮ, ಛಲ, ಶ್ರದ್ಧೆ, ನಿಷ್ಠೆಯಿಂದ ಜನರ ಸೇವೆ ಮಾಡಿ ಸಮಾಜಕ್ಕೆ ಉತ್ತಮ ಕೊಡುವ ಕನಸು ಹೊತ್ತಿದ್ದಾರೆ.ಸ

ತಾತನ ಕಾಲದಿಂದಲೂ ಇವರ ಕುಟುಂಬ ಎಲೆ ಅಡಿಕೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸಿದ್ದಾರೆ. ಮಕ್ಕಳು ಪೋಷಕರಂತೆ ಕಷ್ಟಪಡ ಬಾರದೆಂದು ಅವರಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ, ಅದಕ್ಕೆ ಪ್ರತಿಫಲವಾಗಿ ನಮ್ಮ ಮಗ ಕಷ್ಪಪಟ್ಟು ಓದಿ ಯು.ಪಿ.ಎಸ್‌.ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದುಕೊಂಡು ಇತರರಿಗೆ ಮಾದರಿ ಯಾಗಿದ್ದಾನೆ. ಮುಂದೆ ಉನ್ನತ ಹುದ್ದೆ ಅಲಂಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ದಿವಾಕರ್​ ಅವರ ಪೋಷಕರು ತಮ್ಮ ಸಂತಸ ವ್ಯಕ್ತ ಪಡಿಸಿದ್ದಾರೆ.

-ಪ್ರಿಯಾಂಕ ತಳವಾರ, ಬೆಂಗಳೂರು

Follow Us:
Download App:
  • android
  • ios