ಆಂಧ್ರ ಪ್ರದೇಶದ ಅನಂತಪುರಂ ಕ್ಷೇತ್ರದ ಸಂಸದ, ಟಿಡಿಪಿ ನಾಯಕ ಜೆ.ಸಿ. ದಿವಾಕರ್‌ ರೆಡ್ಡಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕ್ಷೇತ್ರದ ಜನತೆಗೆ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದ ಕಾರಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ದಿವಾಕರ್‌ ರೆಡ್ಡಿ ಹೇಳಿದ್ದಾರೆ.
ಅನಂತಪುರ(ಸೆ.22): ಆಂಧ್ರ ಪ್ರದೇಶದ ಅನಂತಪುರಂ ಕ್ಷೇತ್ರದ ಸಂಸದ, ಟಿಡಿಪಿ ನಾಯಕ ಜೆ.ಸಿ. ದಿವಾಕರ್ ರೆಡ್ಡಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕ್ಷೇತ್ರದ ಜನತೆಗೆ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದ ಕಾರಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ದಿವಾಕರ್ ರೆಡ್ಡಿ ಹೇಳಿದ್ದಾರೆ.
ಅನಂತಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿದ ರೆಡ್ಡಿ, ನನ್ನನ್ನು ನಂಬಿ ಮತ ಹಾಕಿದ ಜನತೆಗೆ ಸಂಸದನಾಗಿ ನ್ಯಾಯ ಒದಗಿಸಲು ವಿಫಲವಾಗಿದ್ದೇನೆ. ಆದ್ದರಿಂದ ನಾನು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ. ಒಬ್ಬ ಜನ ಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ನಿರ್ಮಲೀಕರಣ ಹಾಗೂ ರಸ್ತೆಯ ಅಗಲೀಕರಣ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಚುನಾವಣೆ ವೇಳೆ ನಾನು ನೀಡಿದ್ದ ಎಲ್ಲರಿಗೂ ಕುಡಿಯುವ ನೀರು ಸರಬರಾಜು ಹಾಗೂ ಚಾಗಲ್ಲು ಜಲಾಶಯದಿಂದ ನೀರಾವರಿಗೆ ನೀರು ಹರಿಸುವ ಭರವಸೆಯನ್ನೂ ಈಡೇರಿಸಲಾಗಿಲ್ಲ ಎಂದು ದಿವಾಕರ್ ರೆಡ್ಡಿ ಹೇಳಿದ್ದಾರೆ.
ಇದೇ 25 ಅಥವಾ 26ರಂದು ಲೋಕಸಭಾ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸುತ್ತೇನೆ. ಸಂಸದ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡುತ್ತೇನೆ. ಟಿಡಿಪಿ ಪಕ್ಷದಲ್ಲೇ ಮುಂದುವರಿಯುತ್ತೇನೆ ಎಂದು ದಿವಾಕರ ರೆಡ್ಡಿ ಸ್ಪಪ್ಟಪಡಿಸಿದ್ದಾರೆ. ಇನ್ನು, ಕಳೆದ ಜೂನ್ನಲ್ಲಿ ವಿಮಾನದಲ್ಲಿ ಅನುಚಿತ ವರ್ತನೆ ತೋರಿದ ಆರೋಪ ಮೇಲೆ ದಿವಾಕರ್ ರೆಡ್ಡಿ ದೇಶದ ಗಮನ ಸೆಳೆದಿದ್ದರು
