Asianet Suvarna News Asianet Suvarna News

ಸಂಸತ್ತಿನಲ್ಲಿ ಮುಂದುವರಿದ ನೋಟು ಗದ್ದಲ

ಲೋಕಸಭೆ ಕಲಾಪ ಎಂದಿನಂತೆ ಆರಂಭಗೊಂಡಿತ್ತು. ಆದರೆ ವಿಪಕ್ಷಗಳ ನಾಯಕರು ಮಾತ್ರ ಕಲಾಪಕ್ಕೆ ಹಾಜರಾಗದೇ, ಸಂಸತ್​​ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಕಲಾಪಕ್ಕೆ ಆಗಮಿಸಿದ ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಹೊಸ ವಿಚಾರದ ಚರ್ಚೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಲೋಕಸಭೆ  ಕಲಾಪ ಕೂಡ ಮುಂದೂಡಲಾಯ್ತು.

Disruptions Continue in Parliament Over Demonetization
  • Facebook
  • Twitter
  • Whatsapp

ನವದೆಹಲಿ (ಡಿ.08): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವು ಇಂದು ಕೂಡಾ ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಗಿದೆ.

ರಾಜ್ಯಸಭೆ ಕಲಾಪಗಳು ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ನೋಟು ಸರ್ಕಾರದ ನಿಷೇಧ ಕ್ರಮದ ಬಗ್ಗೆ ಆಕ್ಕ್ಷೇಪಗಳನ್ನೆತ್ತಿದ್ದಾರೆ. ನೊಟು ನಿಷೇಧ ಕ್ರಮವು ಜನವಿರೋಧಿಯಾಗಿದೆ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ.

ಇದೇ ವೇಳೆ ಮಧ್ಯ ಪ್ರವೇಶಿಸಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ವಿಪಕ್ಷ ನಾಯಕರು ಧರಣಿ ಹೆಸರಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವೆಂಕಯ್ಯನಾಯ್ಡು ಮಾತಿಗೆ ತಿರುಗೇಟು ನೀಡಿದ ಕಾಂಗ್ರೆಸ್​ ನಾಯಕ ಗುಲಾಮ್​ ನಬಿ ಆಜಾದ್,​​ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾರಂಭಿಸಿದ್ದಾರೆ.

ಸರ್ಕಾರ ಮತ್ತು ಪಕ್ಷಗಳ ಮಧ್ಯ ನಡೆದ ಮಾತಿನ ಚಕಮಕಿಯಿಂದಾಗಿ ರಾಜ್ಯಸಭೆಯಲ್ಲಿ ಗಲಾಟೆ ಹಾಗೇ ಮುಂದುವರೆದಿತ್ತು, ಹಾಗಾಗಿ ರಾಜ್ಯಸಭೆಯನ್ನು ಮುಂದೂಡಲಾಯ್ತು.

ಲೋಕಸಭೆ ಕಲಾಪ ಎಂದಿನಂತೆ ಆರಂಭಗೊಂಡಿತ್ತು. ಆದರೆ ವಿಪಕ್ಷಗಳ ನಾಯಕರು ಮಾತ್ರ ಕಲಾಪಕ್ಕೆ ಹಾಜರಾಗದೇ, ಸಂಸತ್​​ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಕಲಾಪಕ್ಕೆ ಆಗಮಿಸಿದ ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಹೊಸ ವಿಚಾರದ ಚರ್ಚೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಲೋಕಸಭೆ  ಕಲಾಪ ಕೂಡ ಮುಂದೂಡಲಾಯ್ತು.

Follow Us:
Download App:
  • android
  • ios